Advertisement

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ಪಟ್ಟಿ ಪ್ರಕಟ

08:50 PM Dec 04, 2020 | Adarsha |

ನವದೆಹಲಿ: ವಿಶ್ವದ ಖ್ಯಾತ ಟೆಕ್ನಾಲಜಿ ಕಂಪನಿಯಾದ ಆ್ಯಪಲ್ ತನ್ನ ಆ್ಯಪ್ ಸ್ಟೋರ್ ಬೆಸ್ಟ್ 2020 ಯ ವಿಜೇತರನ್ನು ಪ್ರಕಟಿಸಿದೆ. ಈ ವಿಜೇತರ ಪಟ್ಟಿಯಲ್ಲಿ ಒಟ್ಟು 15 ಆ್ಯಪ್ ಗಳು ಮತ್ತು ಗೇಮ್ ಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ.

Advertisement

ಇದನ್ನೂ ಓದಿ:ಅನಾಥ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತಾ

ಈ ಆ್ಯಪ್ ಗಳು ಮತ್ತು ಗೇಮ್ ಗಳ ಆಯ್ಕೆ ಪ್ರಕಿಯೆಯು  ಆ್ಯಪ್ ಮತ್ತು ಗೇಮ್ ಗಳ ಅತ್ಯುತ್ತಮ ಗುಣಮಟ್ಟ, ಸೃಜನಶೀಲ ವಿನ್ಯಾಸ,  ಉಪಯುಕ್ತತೆ ಮತ್ತು ಹೊಸ ತಂತ್ರಜ್ಞಾನದ ಆಧಾರದ ಮೇಲೆ ಮಾಡಲಾಗಿದೆ ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.

2020ರ ಬೆಸ್ಟ್    ಆ್ಯಪ್ ಗಳು

  • ಈ ವರ್ಷದ ಬೆಸ್ಟ್ ಐ ಪೋನ್ ಆ್ಯಪ್  – ವೇಕ್ ಔಟ್ (Wakeout)
  • ಈ ವರ್ಷದ ಬೆಸ್ಟ್ ಐ ಪ್ಯಾಡ್ ಆ್ಯಪ್  – ಜೂಮ್ (Zoom)
  • ಈ ವರ್ಷದ ಬೆಸ್ಟ್ ಮ್ಯಾಕ್ ಆ್ಯಪ್ – ಫೆಂಟಾಸ್ಟಿಕಲ್ (Fantastical)
  • ಈ ವರ್ಷದ ಬೆಸ್ಟ್ ಆ್ಯಪಲ್ ಟೀವಿ ಆ್ಯಪ್ – ಡಿಸ್ನಿ ಪ್ಲಸ್ (Disney +)
  • ಈ ವರ್ಷದ ಬೆಸ್ಟ್ ಆ್ಯಪಲ್ ವಾಚ್ ಆ್ಯಪ್ – ಎಂಡಲ್ (Endel)

ಈ ವರ್ಷದ ಬೆಸ್ಟ್ ಗೇಮ್ ಗಳು

  • ಈ ವರ್ಷದ ಬೆಸ್ಟ್ ಐ ಪೋನ್ ಗೇಮ್ -ಜಾನ್ಶಿನ್ ಇಂಪ್ಯಾಕ್ಟ್ (Genshin Impact)
  • ಈ ವರ್ಷದ ಬೆಸ್ಟ್ ಐಪ್ಯಾಡ್ ಗೇಮ್ -ಲೆಜೆಂಡ್ಸ್ ಆಫ್ ರುನೆತೆರಾ (Legends of Runeterra)
  • ಈ ವರ್ಷದ ಬೆಸ್ಟ್ ಮ್ಯಾಕ್ ಗೇಮ್ – ಡಿಸ್ಕೋ ಎಲಿಸಿಯಾಮ್ (Disco Elysium)
  • ಈ ವರ್ಷದ ಬೆಸ್ಟ್ ಆ್ಯಪಲ್ ಟಿ ವಿ ಗೇಮ್ _ದಂಡಾರ ಟ್ರಯಲ್ಸ್ ಆಫ್ ದಿ ಫಿಯರ್ (Dandara Trials of Fear)
  • ಈ ವರ್ಷದ ಬೆಸ್ಟ್ ಆ್ಯಪಲ್ ಆರ್ಕೇಡ್ ಗೇಮ್ – ಸ್ನೀಕಿ ಸ್ಯಾಸ್ಯ್ಕಾಚ್ (Sneaky Sasquatch)
Advertisement

2020ಯ  ಆ್ಯಪ್ ಟ್ರೆಂಡ್ಸ್

ಈ ವರ್ಷ   ಒಟ್ಟು 5 ಆ್ಯಪ್ ಗಳನ್ನು ಆ್ಯಪ್ ಟ್ರೆಂಡ್ಸ್ ಲೀಸ್ಟ್ ಗೆ ಸೇರಿಸಲಾಗಿದ್ದು ಶೈನ್, ಕೆರಿಬು, ಪೊಕೆಮನ್ ಗೋ ಮತ್ತು ಶೇರ್ ದಿ ಮೀಲ್ ಆ್ಯಪ್ ಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next