Advertisement

1,471 ವರದಿ ಬಾಕಿ

07:43 AM Jun 09, 2020 | Suhan S |

ರಾಯಚೂರು: ಜಿಲ್ಲೆಯಿಂದ ಸೋಮವಾರ 159 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್‌-19 ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಯಾವುದೇ ಪಾಸಿಟಿವ್‌ ಪ್ರಕರಣ ದೃಢಪಟ್ಟಿಲ್ಲ. ದೇವದುರ್ಗ ತಾಲೂಕಿನಿಂದ 15, ಲಿಂಗಸುಗೂರು ತಾಲೂಕಿನಿಂದ 15, ಮಾನ್ವಿ ತಾಲೂಕಿನಿಂದ 21, ಸಿಂಧನೂರು ತಾಲೂಕಿನಿಂದ 15 ಮತ್ತು ರಾಯಚೂರು ತಾಲೂಕಿನಿಂದ 93 ಜನರ ವರದಿ ಕಳುಹಿಸಲಾಗಿದೆ.

Advertisement

ಹಿಂದೆ ಕಳುಹಿಸಿದ ವರದಿಗಳಲ್ಲಿ 21 ನೆಗೆಟಿವ್‌ ಬಂದಿವೆ. ಈವರೆಗೆ 17,557 ಮಾದರಿಗಳನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಿದ್ದು, 15,721 ವರದಿಗಳು ನೆಗೆಟಿವ್‌ ಬಂದಿವೆ. ಉಳಿದ 1,471 ಸ್ಯಾಂಪಲ್‌ಗ‌ಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿಂದು 512 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಈವರೆಗೆ 359 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದ ಸೋಂಕಿತರ ಪೈಕಿ 82 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next