Advertisement
“ಯಾವ ವಿಷಯದ ಬಗ್ಗೆ ಪ್ರತಿಭಟನೆ ನಡೆಯುವುದಿತ್ತು ಅನ್ನುವುದು ನಮಗೆ ಸಂಬಂಧವಿಲ್ಲ. ಆದರೆ, 144 ಸೆಕ್ಷನ್ ಜಾರಿಗೊಳಿಸಲು ತೆಗೆದುಕೊಳ್ಳಲಾದ ನಿರ್ಣಯದ ಪ್ರಕ್ರಿಯೆಯಲ್ಲಿ ನಿಸ್ಸಂದೇಹವಾಗಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿರುವು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಮುನ್ನೆಚ್ಚರಿಕಾ ಕ್ರಮ ಆಗಿರಬಹುದು. ಆದರೆ, ನಾಗರಿಕರ ಮೂಲಭೂತ ಹಕ್ಕಗಳ ಮೇಲೆ ಪರಿಣಾಮ ಬೀರಿದೆ’.
Related Articles
Advertisement
ಹೊಸದಾಗಿ ಅರ್ಜಿ ಸಲ್ಲಿಸಿ: ಶಾಂತಿಯುತ ಪ್ರತಿಭಟನೆ ಅಥವಾ ರ್ಯಾಲಿ ನಡೆಸಲು ಅನುಮತಿ ಕೋರಿ ಅರ್ಜಿದಾರರು ಮೂರು ದಿನಗಳಲ್ಲಿ ಪೊಲೀಸರಿಗೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ, ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿತುವ ತೀರ್ಪು ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್, ಆದಿತ್ಯ ಸೋಂಧಿ ವಾದ ಮಂಡಿಸಿದರು.
ಹೊಸದಾಗಿ ಆದೇಶ ಹೊರಡಿಸಬೇಕುನಗರದಲ್ಲಿ ನಿಷೇಧಾಜ್ಞೆ ಹೇರಿದ ಅವಧಿ ಡಿ.21ಕ್ಕೆ ಮುಗಿಯಲಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಅರ್ಜಿದಾರರ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಹಾಗಾಗುವುದಿಲ್ಲ. ಡಿ.18ರ ಆದೇಶ ಡಿ.21ಕ್ಕೆ ಕೊನೆಗೊಳ್ಳಲಿದೆ. ಒಂದೊಮ್ಮೆ ನಿಷೇಧಾಜ್ಞೆ ಮುಂದುವರಿಸುವ ಅಥವಾ ವಿಸ್ತರಿಸುವ ಪ್ರಮೆಯ ಎದುರಾದರೆ, ಸೂಕ್ತ ವರದಿಗಳನ್ನು ಪಡೆದುಕೊಂಡ ಬಳಿಕ ಅಗತ್ಯವೆನಿಸಿದರಷ್ಟೇ ನಿಷೇಧಾಜ್ಞೆ ಹೇರುವ ಬಗ್ಗೆ ಹೊಸದಾಗಿ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿತು. ಎಲ್ಲಾ ಪ್ರತಿಭಟನೆಗಳು ಹಿಂಸಾರೂಪ ಪಡೆಯಲಿವೆಯೇ? ಸಿಜೆ ಪ್ರಶ್ನೆ
ಇದಕ್ಕೂ ಮುನ್ನ ಬೆಳಿಗ್ಗೆ ವಿಚಾರಣೆ ನಡೆದ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿಗಳು, “”ಪ್ರತಿಯೊಂದು ಪ್ರತಿಭಟನೆಯೂ ಹಿಂಸಾರೂಪ ಪಡೆಯಲಿದೆಯೇ ಎಂಬ ಊಹೆಯ ಮೇರೆಗೆ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದೆಯೇ? ”ಎಂದು ಪ್ರಶ್ನಿಸಿತು. ಅಲ್ಲದೆ, ನೀವು ಪ್ರತಿಯೊಂದು ಪ್ರತಿಭಟನೆಯನ್ನು ನಿಷೇಧಿಸುತ್ತೀರಾ? ಸರ್ಕಾರದದ ನೀತಿಗಳ ವಿರುದ್ಧ ಯಾರೂ ಧ್ವನಿ ಎತ್ತುವಂತಿಲ್ಲವೇ? ಯಾವ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಪ್ರತಿಭಟನೆಗೆ ಅನುಮತಿ ನೀಡಿದ್ದನ್ನು ರದ್ದುಗೊಳಿಸಿದ್ದೀರಿ, ಆ ಮೂಲಕ ಅವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದ್ದೀರಿ”ಎಂದು ಪ್ರಶ್ನಿಸಿದರು ಕಾನೂನು-ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ: ಅಡ್ವೋಕೇಟ್ ಜನರಲ್
ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ ನಾಗರಿಕರ ಸಂವಿಧಾನದತ್ತ ಮೂಲಭೂತ ಹಕ್ಕುಗಳ ರಕ್ಷಣೆಯ ಜೊತೆಗೆ ಗಲಭೆಗಳು ನಡೆಯಬಾರದು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗಬಾರದು, ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಆಗದಂತೆ ನೋಡಿಕೊಳ್ಳುವ ಸಾಂವಿಧಾನಿಕ ಜವಾಬ್ದಾರಿಯೂ ರಾಜ್ಯ ಸರ್ಕಾರದ ಮೇಲಿದೆ. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಶಾಂತಿಯುತ ಪ್ರತಿಭಟನೆಗೆ ಅಡ್ಡಿಯೂ ಇಲ್ಲ, ಅಭ್ಯಂತರವೂ ಇಲ್ಲ. ಆದರೆ, ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿ ಗಲಾಟೆ ಮಾಡಬಹುದು ಎಂಬ ಬಗ್ಗೆ ಕಳೆದ ವಾರದಿಂದ ನಿರಂತರವಾಗಿ ಗುಪ್ತಚರ ಹಾಗೂ ಇನ್ನಿತರೆ ಮೂಲಗಳಿಂದ ಸಿಕ್ಕಿದ್ದ ಮಾಹಿತಿ ಆಧಾರದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾಯ್ದೆಯ ಪರ-ವಿರೋಧ ಎರಡೂ ಕಡೆಯ ಪ್ರತಿಭಟನೆಗಳು ನಡೆಯಲಿದ್ದವು. ಈ ಹಿನ್ನೆಲೆಯಲ್ಲಿ ಆಯುಕ್ತರು ತೀರ್ಮಾನ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ವಿಶೇಷ ಸಂದರ್ಭಗಳಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ ನಂತರವೂ ಸೆಕ್ಷನ್ 144 ಜಾರಿಗೊಳಿಸಬಹುದು ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು. ಮಂಗಳೂರು ಘಟನೆಗೆ ವಿಷಾದ:
ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವಿಷಾದವಿದೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಯವರು ಗುರುವಾರ ತಡ ರಾತ್ರಿವರೆಗೆ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಪ್ರತಿಭಟನೆ ಹಿಂಸಾಚಾರದ ರೂಪ ಪಡೆಯಲು ಕೇರಳದಿಂದ ಬಂದವರು ಕಾರಣ ಎಂಬ ಶಂಕೆಯಿದೆ ಎಂದು ಹೈಕೋರ್ಟ್ ಮುಂದೆ ಹೇಳಿದ್ದರು.