Advertisement

8 ಕಾರ್ಯಾಚರಣೆ; ಪಾಕಿಸ್ತಾನದ ಏಳು ಸೇರಿ 14 ಉಗ್ರರ ಸಂಹಾರ

12:33 PM Jan 14, 2022 | Team Udayavani |

ಜಮ್ಮು: ಪ್ರಸಕ್ತ ವರ್ಷದ ಆರಂಭದಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ “ಉಗ್ರ ಸಂಹಾರ’ ಕಾರ್ಯಾಚರಣೆ ಶುರುವಾಗಿದ್ದು, 13 ದಿನಗಳಲ್ಲಿ 8 ಕಾರ್ಯಾಚರಣೆ ನಡೆಸಿ, 7 ಮಂದಿ ಪಾಕಿಸ್ತಾನಿಯರು ಸೇರಿದಂತೆ 14 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್‌ ಸಿಂಗ್‌ ಅವರೇ ಈ ಮಾಹಿತಿ ನೀಡಿದ್ದಾರೆ.

Advertisement

ಕಣಿವೆಯನ್ನು ಭಯೋತ್ಪಾದನೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಬುಧವಾರ ರಾತ್ರಿಯೂ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಎನ್‌ಕೌಂಟರ್‌ ನಡೆದಿದ್ದು, ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಉಗ್ರನನ್ನು ಹತ್ಯೆಗೈಯ್ಯಲಾಗಿದೆ. ಹತ ಪಾಕಿಸ್ತಾನಿ ಪ್ರಜೆಯನ್ನು ಬಾಬರ್‌ ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ರೋಹಿತ್‌ ಚಿಬ್‌ ಹುತಾತ್ಮರಾಗಿದ್ದಾರೆ. ಜತೆಗೆ ಇಬ್ಬರು ನಾಗರಿಕರು ಮತ್ತು ಮೂವರು ಯೋಧರು ಗಾಯಗೊಂಡಿದ್ದಾರೆ ಎಂದೂ ದಿಲಾºಗ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಇಬ್ಬರು ಯೋಧರು ಹುತಾತ್ಮ: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿ ಗುರುವಾರ ನಡೆದ ನಿಗೂಢ ಫೈರಿಂಗ್‌ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಗೆ ಕಾರಣವೇನು, ಗುಂಡು ಹಾರಿಸಿದ್ದು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next