Advertisement

ಬಳ್ಳಾರಿ ಪಾಲಿಕೆ ಚುನಾವಣೆ: 14 ಚುನಾವಣಾ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

04:16 PM Apr 26, 2021 | Team Udayavani |

ಬಳ್ಳಾರಿ: ಎಪ್ರಿಲ್27 ರಂದು (ಮಂಗಳವಾರ) ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಕೋವಿಡ್ ಸೋಂಕು ಕಂಟಕ ತಂದಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಿದ್ದ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಬಳ್ಳಾರಿ ಮಹಾನಗರ ಪಾಲಿಕೆಗೆ ಏ.27 ರಂದು ಮಂಗಳವಾರ ಮತದಾನ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಚುನಾವಣಾ ಸಿಬ್ಬಂದಿಗಳನ್ನು ಮತ ಯಂತ್ರದೊಂದಿಗೆ ಮತಗಟ್ಟೆಗಳಿಗೆ ನಿಯೋಜಿಸುವ ಮಸ್ಟರಿಂಗ್ ಕೆಲಸ ಸೋಮವಾರ ನಡೆಯುತ್ತಿದೆ. ನಿಯೋಜನೆಗೂ ಮುನ್ನ ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಟೆಸ್ಟಿಂಗ್ ನಲ್ಲಿ‌14ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪಾಸಿಟಿವ್ ದೃಢವಾಗಿದ್ದು, ಆತಂಕ ಮೂಡಿಸಿದೆ.

ಇದನ್ನೂ ಓದಿ:ಸಿಎಂ ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆ ಮದ್ಯದಂಗಡಿ ಮುಂದೆ ಎಣ್ಣೆ ಪ್ರಿಯರ ಸಾಲು!

ಸಿಬ್ಬಂದಿಗೆ ಮೊದಲು ಮೂಲಕ ದೇಹ ತಾಪಮಾನ ಪರಿಶೀಲಿಸಲಾಯಿತು. ಈ ವೇಳೆ ತಾಪಮಾನ ಜಾಸ್ತಿಯಿದ್ದು, ಸ್ವಲ್ಪ ಅನುಮಾನ ಬಂದರೂ ಅಂತಹವರಿಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 14 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಇತರೆ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದರಲ್ಲಿ ಕೆಲವರಿಗೆ ಮತಪೆಟ್ಟಿಗೆ ಕೊಂಡೊಯ್ಯುವಾಗ ಪಾಸಿಟಿವ್ ಬಂದಿದೆ.

ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್: ‘ರಾಜ್ಯದಲ್ಲಿ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್’

Advertisement
Advertisement

Udayavani is now on Telegram. Click here to join our channel and stay updated with the latest news.

Next