Advertisement

ಅಬಕಾರಿ ದಾಳಿ: ಕಲಬೆರಕೆ ಸೇಂದಿ, ಮೂರು ಆಟೋ ಜಪ್ತಿ

05:48 PM Jul 06, 2022 | Team Udayavani |

ಗುರುಮಠಕಲ್‌: ತಾಲೂಕಿನ ಅರಕೇರ(ಕೆ) ಗ್ರಾಮದಲ್ಲಿ ನೀರು ಸರಬರಾಜು ಘಟಕದ ಹತ್ತಿರ ಅಕ್ರಮ ಕಲಬೆರಕೆ ಸೇಂದಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಕಲಬೆರಕೆ ಸೇಂದಿ ಮತ್ತು ಮೂರು ಆಟೋ ಜಪ್ತಿ ಮಾಡಿದ್ದಾರೆ.

Advertisement

33 ಲೀಟರ್‌ ಕಲಬೆರಕೆ ಸೇಂದಿ ಸಹ ವಶಪಡಿಸಿಕೊಳ್ಳಲಾಗಿದೆ. ಒಟ್ಟು 5,41,450 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು, 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರವೀಣಕುಮಾರ, ಮಹ್ಮದ ರಫೀ, ನೀಲಕಂಠ, ಶರಣಬಸಪ್ಪ, ಶರೀಫ್‌, ಶೇಖರ, ದೊಂಡಿಬಾ, ಶಂಕರ, ಗುರುನಾಥ, ಅನಿಲ್‌, ಸುಭಾನಿ, ನಾಗರಾಜ, ಜಟ್ಟೆಪ್ಪ ಎಂಬವರನ್ನು ಬಂಧಿಸಲಾಗಿದೆ.

ಅಬಕಾರಿ ನಿರೀಕ್ಷಕರು ಕೇದಾರನಾಥ ಎಸ್‌ .ಟಿ., ಅಬಕಾರಿ ಉಪ ನಿರೀಕ್ಷಕರಾದ ಶರಣು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ನಂದಿಗೌಡ, ಬಸವರಾಜ ಇದ್ದರು. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next