Advertisement

ಬೆಳಗಾವಿಯಲ್ಲಿ ಅಪ್ಪಳಿಸಿದ ಕೋವಿಡ್-19: ಒಂದೇ ದಿನ 14 ಮಂದಿಗೆ ಸೋಂಕು

08:13 AM May 01, 2020 | keerthan |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಮಹಾಮಾರಿಯ ಅಟ್ಟಹಾಸ ದಿನದಿನಕ್ಕೂ ಎರಿಕೆ ಆಗುತ್ತಿದ್ದು, ಒಂದೇ ದಿನ 14 ಮಂದಿಗೆ ಕೋವಿಡ್-19 ಪಾಸಿಟಿವ್ ಆಗುವ ಮೂಲಕ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.

Advertisement

ಹಿರೇಬಾಗೇವಾಡಿಯ 11 ಹಾಗೂ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ 3 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 69ಕ್ಕೇರಿದಂತಾಗಿದೆ.

ಸಂಕೇಶ್ವರದ 9 ವರ್ಷದ ಬಾಲಕ, 8 ವರ್ಷದ ಬಾಲಕಿ, 75 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ.

ಹಿರೇಬಾಗೇವಾಡಿಯ 24 ವರ್ಷದ ಮಹಿಳೆ, 27 ವರ್ಷದ ಪುರುಷ, 24 ವರ್ಷದ ಮಹಿಳೆ, 18 ವರ್ಷದ ಯುವಕ, 48 ವರ್ಷದ ಮಹಿಳೆ, 50 ವರ್ಷದ ಪುರುಷ, 27 ವರ್ಷದ ಮಹಿಳೆ, 43 ವರ್ಷದ ಪುರುಷ, 16 ವರ್ಷದ ಬಾಲಕ, 36 ವರ್ಷದ ಮಹಿಳೆ, 36 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಹಿರೇಬಾಗೇವಾಡಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸದ್ಯ ಈ ಗ್ರಾಮವೊಂದರಲ್ಲಿಯೇ 36 ಜನರಿಗೆ ಸೋಂಕು ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next