ಬೆಂಗಳೂರು: ಟ್ರೇಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿಸಿ ವಿವಿಧ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪದ್ಮನಾಭನಗರದ ನಿವಾಸಿ ಯೋಗೇಶ್ ಕುಮಾರ್ ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯೋಗೇಶ್ ಕುಮಾರ್ ಫೇಸ್ಬುಕ್ನಲ್ಲಿ ಬೈಯ್ಕಾಯಿನ್ ಎಂಬ ಟ್ರೇಡಿಂಗ್ ಆ್ಯಪ್ ನೋಡಿ, ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಸೈಮನ್ ಎಂಬಾತ ಬಿನಾನ್ಸ್ ಖಾತೆ ತೆರೆಯುವಂತೆ ಸೂಚಿಸಿ, ಅದರಲ್ಲಿ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದಾನೆ.
ಅದರಂತೆ ಹಣ ಪಾವತಿಸಿದ್ದು, 1.24 ಲಕ್ಷ ರೂ. ಡಾಲರ್ ಲಾಭದಲ್ಲಿ ಯೋಗೇಶ್ ಇದ್ದರು. ಈ ಹಣ ಡ್ರಾ ಮಾಡಲು ಹೋದಾಗ ಆರೋಪಿಗಳು, 3,474 ಡಾಲರ್ ಪಾವತಿಸುವಂತೆ ಸೂಚಿಸಿದ್ದಾರೆ. ಅದಕ್ಕಾಗಿ 2,000 ರೂ. ಡಾಲರ್ ಪಾವತಿಸಿದ್ದಾರೆ. ನಂತರ ತೆರಿಗೆ ಹಾಗೂ ಇತರೆ ಶುಲ್ಕ ಎಂದು ಹಂತ-ಹಂತವಾಗಿ 14 ಲಕ್ಷ ರೂ. ಪಾವತಿಸಿಕೊಂಡು ವಂಚಿಸಿದ್ದಾರೆ.
ಈ ಸಂಬಂಧ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.