ಢಾಕಾ: ಸರಣಿ ದಾಳಿಯಲ್ಲಿ ಸುಮಾರು 14 ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಘಟನೆ ಬಾಂಗ್ಲಾದೇಶದ ವಾಯುವ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿಟ್ಲ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ದೇವಾಲಯದಲ್ಲಿರುವ ವಿಗ್ರಹಗಳನ್ನು ರಾತ್ರಿಯ ಸಮಯದಲ್ಲಿ ಧ್ವಂಸಗೊಳಿಸಿದ್ದಾರೆ. ಸುಮಾರು 14 ದೇವಸ್ಥಾನಗಳಲ್ಲಿನ ವಿಗ್ರಹಗಳನ್ನು ಒಡೆದುಹಾಕಿರುವುದಾಗಿ ಬಾಲಿಯಾದಾಂಗಿ ಹಿಂದೂ ಸಮುದಾಯದ ಮುಖಂಡ ಬಿದ್ಯಾನಾಥ್ ಬರ್ಮಾನ್ ತಿಳಿಸಿದ್ದಾರೆ.
ರಾತ್ರೋರಾತ್ರಿ ದೇವಾಲಯದೊಳಕ್ಕೆ ನುಗ್ಗಿದ ದುಷ್ಕರ್ಮಿಗಳು ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿ, ಕೆರೆ ಹಾಗೂ ದೇವಸ್ಥಾನದ ಆವರಣದೊಳಗೆಲ್ಲಾ ಎಸೆದಿರುವುದಾಗಿ ಬರ್ಮಾನ್ ವಿವರಿಸಿದ್ದಾರೆ.
Related Articles
ಕತ್ತಲಾಗಿದ್ದರಿಂದ ನಮಗೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವ ಮೂಲಕ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಾಂಗ್ಲಾದ ಹಿಂದೂ ಸಮುದಾಯ ಒತ್ತಾಯಿಸುವುದಾಗಿ ಬರ್ಮಾನ್ ಹೇಳಿದರು.
ಈ ಪ್ರದೇಶ ಯಾವಾಗಲೂ ತುಂಬಾ ಉತ್ತಮವಾದ ಸಾಮರಸ್ಯಕ್ಕೆ ಸಾಕ್ಷಿಯಾಗಿತ್ತು. ಈ ಹಿಂದೆ ಯಾವತ್ತೂ ಇಂತಹ ಪೈಶಾಚಿಕ ಕೃತ್ಯ ನಡೆದಿರಲಿಲ್ಲ ಎಂದು ಹಿಂದೂ ಸಮುದಾಯದ ಮುಖಂಡ ಸಮರ್ ಚಟರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಮ್ ಸಮುದಾಯಕ್ಕೆ ಹಿಂದೂಗಳ ಜತೆ ಯಾವುದೇ ಭಿನ್ನಾಭಿಪ್ರಾಯ, ಜಗಳವಿಲ್ಲ. ಆದರೆ ಈ ದುಷ್ಕರ್ಮಿಗಳು ಯಾರು ಎಂಬುದು ನಮಗೆ ತಿಳಿಯುತ್ತಿಲ್ಲ. ಘಟನೆ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಠಾಣಾಧಿಕಾರಿ ಖೈರುಲ್ ಅನಾಮ್ ತಿಳಿಸಿದ್ದಾರೆ.