ಹೈದರಾಬಾದ್: ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 14 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತೆಲಂಗಾಣದ ನಾಲಗೊಂಡಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಅಡ್ಡಂಕಿ-ನಾರ್ಕೆಟ್‌ಪಲ್ಲಿ ಹೆದ್ದಾರಿ ಬಳಿಯ ಬಗ್ಗಬವಿಗುಡೆಮ್ ಎಂಬ ಹಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಹಸುಗಳು ಮೃತಪಟ್ಟು 6 ಹಸುಗಳು ಗಂಭೀರವಾಗಿ ಗಾಯಗೊಂಡಿವೆ.
ಹೈದರಾಬಾದ್‌ನಿಂದ ಚೆನ್ನೈಗೆ ಬರುತ್ತಿದ್ದ ಬಸ್ಸು ಹೆದ್ದಾರಿ ದಾಟುತ್ತಿದ್ದ ಹಸುಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, 7 ಲಕ್ಷ ರೂ. ಮೊತ್ತದ ಹಸುಗಳನ್ನು ಸಾವನ್ನಪ್ಪಿದೆ. ಬಸ್‌ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ರೈತ ನೀಡಿದ ದೂರಿನಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Related Articles
ಇದನ್ನೂ ಓದಿ: 10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ