Advertisement

ಶೂ, ಸಾಕ್ಸ್‌ ವಿತರಣೆಗೆ 132 ಕೋ.ರೂ. ಬಿಡುಗಡೆ :ಸಚಿವ ಬಿ.ಸಿ. ನಾಗೇಶ್‌

12:57 AM Jul 09, 2022 | Team Udayavani |

ಬೆಂಗಳೂರು: ಒಂದನೆಯಿಂದ ಹತ್ತನೇ ತರಗತಿಯ ವರೆಗಿನ ಸರಕಾರಿ ಶಾಲಾ ಮಕ್ಕಳಿಗೆ ಶೂ, ಸ್ಯಾಂಡಲ್‌ಗ‌ಳು ಮತ್ತು ಸಾಕ್ಸ್‌ ವಿತರಣೆಗೆ 132 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

Advertisement

ವಿಪಕ್ಷ ಕಾಂಗ್ರೆಸ್‌ ಟೀಕೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶೂ ಮತ್ತು ಸಾಕ್ಸ್‌ಗಳನ್ನು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣ ಸಮಿತಿ (ಎಸ್‌ಡಿಎಂಸಿ)ಗಳ ಮೂಲಕ ವಿತರಿಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ಸರಕಾರಿ ಶಾಲೆಗಳ 1ರಿಂದ 10ನೇ ತರಗತಿಗಳ 46.37 ಲಕ್ಷ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಒಂದು ಜತೆ ಶೂ ಮತ್ತು ಎರಡು ಜತೆ ಸಾಕ್ಸ್‌ ಅಥವಾ ಸ್ಯಾಂಡಲ್‌ಗ‌ಳನ್ನು ವಿತರಿಸಲು ಅನುದಾನ ಬಿಡುಗಡೆಗೊಳಿಸಿದ್ದು, ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನು ಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next