Advertisement

13.05 ಲ.ರೂ. ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ

02:50 AM Jul 17, 2017 | Team Udayavani |

ಪಡುಬಿದ್ರಿ: ಉಡುಪಿ ಪವರ್‌ ಕಾರ್ಪೊರೇಶನ್‌ ಸಂಸ್ಥೆಯು ಅದಾನಿ ಫೌಂಡೇಶನ್‌ ಸಹಯೋಗ ದೊಂದಿಗೆ ಜು. 10ರಂದು 14 ಶಾಲೆಗಳಲ್ಲಿ ಓದುತ್ತಿರುವ ಒಟ್ಟು 1450 ಮಕ್ಕಳಿಗೆ  13.05 ಲಕ್ಷ ರೂ. ಮೌಲ್ಯದ ಪರಿಕರಗಳನ್ನು ವಿತರಿಸಿತು.

Advertisement

ಬೆಳಪು  ಗ್ರಾಮದ ದುರ್ಗಾದೇವಿ ಅನುದಾನಿತ ಹಿ.  ಪ್ರಾ.  ಶಾಲೆ, ಸರಕಾರಿ ಹಿ. ಪ್ರಾ. ಶಾಲೆ ಬೆಳಪು, ಸರಕಾರಿ ಪ್ರೌಢ ಶಾಲೆ ಬೆಳಪು ಹಾಗೂ ಸಿ.ಎಸ್‌.ಐ ಸಂಯುಕ್ತ ಪ್ರೌಢ ಶಾಲೆ ಮೂಳೂರು, ಯು.ಬಿ.ಎಂ.ಸಿ ಹಿ. ಪ್ರಾ. ಶಾಲೆ ಮೂಳೂರು, ಸರಕಾರಿ ಪ್ರೌಢ ಶಾಲೆ ಮೂಳೂರು, ಸರಕಾರಿ ಹಿ. ಪ್ರಾ. ಶಾಲೆ ಮೂಳೂರು, ಕಾಪು ಪಡು ಹಿ. ಪ್ರಾ. ಶಾಲೆ ಕಾಪು, ಸರಕಾರಿ ಹಿ. ಪ್ರಾ. ಶಾಲೆ ಕೈಪುಂಜಾಲು, ಹಿಂದೂ ಅನುದಾನಿತ ಹಿ.  ಪ್ರಾ.  ಶಾಲೆ ಶಿರ್ವ, ಡಾನ್‌ ಬಾಸೋR ಹಿ. ಪ್ರಾ. ಶಾಲೆ ಶಿರ್ವ, ಸ. ಮಾ. ಹಿ. ಪ್ರಾ. ಶಾಲೆ ಕಾಪು, ಸ. ಹಿ. ಪ್ರಾ. ಶಾಲೆ ಪೊಲಿಪು, ಸರಕಾರಿ ಪ್ರೌಢ ಶಾಲೆ ಪೊಲಿಪು ಶಾಲೆಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪರಿಕರಗಳನ್ನು ಸಿ.ಎಸ್‌.ಆರ್‌ ಯೋಜನೆಯ ಶೆ„ಕ್ಷಣಿಕ ಕಾರ್ಯಕ್ರಮದಡಿಯಲ್ಲಿ ವಿತರಿಸ ಲಾಯಿತು. ಪರಿಕರಗಳಲ್ಲಿ ನೋಟ್‌ ಪುಸ್ತಕಗಳು, ಬ್ಯಾಗ್‌, ಕಂಪಾಸ್‌ ಬಾಕ್ಸ್‌ ಹಾಗೂ ಕೊಡೆ ಒಳಗೊಂಡಿದ್ದವು. 
ಶಾಲಾ ಪರಿಕರಗಳನ್ನು ಯುಪಿಸಿಎಲ್‌ ಕಂಪನಿಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಮುಖೋÂಪಾಧ್ಯಾಯರು ಹಾಗೂ ಶಿಕ್ಷಕರ ಉಪಸ್ಥಿತಿಯಲ್ಲಿ ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ | ದೇವಿಪ್ರಸಾದ್‌ ಶೆಟ್ಟಿ ಅದಾನಿ ಸಮೂಹದ ಸಾಮಾಜಿಕ ಚಟುವಟಿಕೆ
ಗಳನ್ನು ಕೊಂಡಾಡಿದರು. ಅದಾನಿ ಫೌಂಡೇಶನ್‌ ಶೆ„ಕ್ಷಣಿಕ ಕೇÒತ್ರದ ಬೆಳವಣಿಗೆಗೆ ಒತ್ತು ನೀಡಿ ಕಾಪು ತಾಲೂಕಿನಾದ್ಯಂತ ಸುಮಾರು 80 ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಶಾಲಾ ಪರಿಕರಗಳ ವಿತರಣಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ಅಮೀನ್‌, ಯುಪಿಸಿಎಲ್‌ ನ ಎಜಿಎಂ ಗಿರೀಶ್‌ ನಾವಡ, ಪ್ರಬಂಧಕ ರವಿ ಜೀರೆ ಹಾಗೂ ಅದಾನಿ ಫೌಂಡೇಶನ್‌ನ ಸುಕೇಶ್‌ ಸುವರ್ಣ, ವಿನೀತ್‌ ಅಂಚನ್‌ ಹಾಗೂ ಅನುದೀಪ್‌ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next