Advertisement
ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳು ಆರಂಭವಾಗಿವೆ. ಅನರ್ಹಗೊಂಡ ಈ ಶಾಸಕರು ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ (ಇನ್ನೂ 3 ವರ್ಷ 10 ತಿಂಗಳು) ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಅಥವಾ ಅಧಿಕಾರ ಅನುಭವಿಸುವ ಹಾಗಿಲ್ಲ. ಒಂದು ವೇಳೆ, ಈ ವಿಧಾನಸಭೆಯ ಅವಧಿ ಮೊಟಕುಗೊಂಡಲ್ಲಿ 16ನೇ ವಿಧಾನಸಭೆಗೆ ನಡೆಯಬಹುದಾದ ಚುನಾವಣೆಗೆ ಸ್ಪರ್ಧಿಸಲು ಅಡ್ಡಿ ಇಲ್ಲ. ಆದರೆ, ಅನರ್ಹತೆಗೊಂಡಿರುವ ಮೂವರು ಸುಪ್ರೀಂ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Related Articles
Advertisement
ಹೊಸ ಲೆಕ್ಕಾಚಾರಪ್ರಸ್ತುತ ಸ್ಪೀಕರ್ ಕ್ರಮದಿಂದ ರಾಜ್ಯ ವಿಧಾನಸಭೆಯ ಬಲ 221ಕ್ಕೆ ಇಳಿದಿದ್ದು ಬಹುಮತಕ್ಕೆ 112 ಬೇಕಾಗಿದೆ. ಪಕ್ಷೇತರ ಶಾಸಕನ ಆನರ್ಹತೆಯಿಂದ ಬಿಜೆಪಿಯ ಬಲ 105 ಹಾಗೂ ಒಬ್ಬ ಪಕ್ಷೇತರ ಸೇರಿ 106 ಆಗಲಿದೆ. ಸ್ಪೀಕರ್ ಸೇರಿ ಕಾಂಗ್ರೆಸ್-ಜೆಡಿಎಸ್ ಬಲ 100 ಆಗುತ್ತದೆ. ಬಿಎಸ್‌ಪಿ ಶಾಸಕ ಬೆಂಬಲ ನೀಡಿದರೆ 101, ನಾಮನಿರ್ದೇಶನ ಸದಸ್ಯನಿಗೆ ಮತದಾನ ಹಕ್ಕು ಇರುವುದರಿಂದ 102 ಆಗಲಿದ್ದು, ಹದಿಮೂರು ಅತೃಪ್ತರು ವಾಪಸ್ ಬಂದು ರಾಜೀನಾಮೆ ಹಿಂಪಡೆದರೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಬಲ 115 ಕ್ಕೆ ಏರಲಿದೆ. ಗೈರು ಹಾಜರಾಗಿದ್ದ ಶ್ರೀಮಂತಪಾಟೀಲ್, ಬಿ.ನಾಗೇಂದ್ರ ಇದೀಗ ಅನಿವಾರ್ಯವಾಗಿ ಬರಬೇಕಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದು. ಇತ್ತ ಕಡೆ, ಬಿಜೆಪಿಯ ಈಗಿನ ಸದಸ್ಯ ಬಲ 106 ಆಗಿದ್ದು, ಬಹುಮತ ಸಾಬೀತುಪಡಿಸಲು ಇನ್ನೂ ಆರು ಮಂದಿ ಬೇಕಾಗುತ್ತದೆ. ಒಂದು ವೇಳೆ ಮೊನ್ನೆಯ ಹಾಗೆ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಂತೆ ನೋಡಿಕೊಂಡಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ. ಆದರೆ, ಅತೃಪ್ತ ಶಾಸಕರು ಸದನಕ್ಕೆ ಬಂದಲ್ಲಿ ಪರಿಸ್ಥಿತಿ ಬದಲಾಗಬಹುದು.
ಕಾದು ನೋಡುವುದು ಸೂಕ್ತ: ಬಿಜೆಪಿ ವರಿಷ್ಠರು
ಪಕ್ಷೇತರ ಸೇರಿದಂತೆ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಸ್ಪೀಕರ್ ಗುರುವಾರ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಉಳಿದ 13 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥದ ನಂತರವೇ ಮುಂದುವರಿಯುವುದು ಸೂಕ್ತ ಎಂಬ ಚಿಂತನೆ ನಡೆಸಿದಂತಿದೆ. ರಾಜೀನಾಮೆ ಸಲ್ಲಿಸಿದ 15 ಶಾಸಕರ ಪೈಕಿ ಮೂವರು ಶಾಸಕರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್ ಈಗಾಗಲೇ ಇತ್ಯರ್ಥಪಡಿಸಿದ್ದಾರೆ. ಈ ಹಂತದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆನಿಸದು. ಉಳಿದ ಶಾಸಕರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್ ಸದ್ಯದಲ್ಲೇ ಇತ್ಯರ್ಥಪಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ಹಂತದಲ್ಲಿ ಕಾದು ನೋಡಿ ಮುಂದುವರಿಯುವುದು ಸೂಕ್ತವೆನಿಸುತ್ತದೆ. ಈ ಬಗ್ಗೆ ಶುಕ್ರವಾರ ಚರ್ಚಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾ ಜತೆಗೆ ಒಂದು ಸುತ್ತಿನ ಮಾತುಕತೆ ನಡೆದಿತ್ತು.
ಅನರ್ಹ ಆದರೆ…
-ಹಾಲಿ ವಿಧಾನಸಭೆ ಅವಧಿಯಲ್ಲಿಯೇ ಉಪ ಚುನಾವಣೆ ಇದ್ದರೆ ಸ್ಪರ್ಧಿಸುವಂತಿಲ್ಲ. -ಅನರ್ಹತೆಯು ಹದಿನೈದನೇ ವಿಧಾನಸಭೆ ಅವಧಿಯಾದ 2023 ಮೇವರೆಗೆ ಅನ್ವಯ. -ಈ ಅವಧಿಯಲ್ಲಿ ವಿಧಾನಸಭೆ ವಿಸರ್ಜನೆಯಾಗಿ ಹೊಸತಾಗಿ ಚುನಾವಣೆ ನಡೆದರೆ ಸ್ಪರ್ಧಿಸಬಹುದು
-ಈ ವಿಧಾನಸಭೆ ಅವಧಿಯಲ್ಲಿ ಸಚಿವರಾಗುವಂತಿಲ್ಲ ಹಾಗೂ ಸರ್ಕಾರದಲ್ಲಿ ವೇತನ ಸಹಿತ ಹುದ್ದೆ ಹೊಂದುವಂತೆ ಇಲ್ಲ.
-ಈ ವಿಧಾನಸಭೆ ಅವಧಿಯಲ್ಲಿ ಸಚಿವರಾಗುವಂತಿಲ್ಲ ಹಾಗೂ ಸರ್ಕಾರದಲ್ಲಿ ವೇತನ ಸಹಿತ ಹುದ್ದೆ ಹೊಂದುವಂತೆ ಇಲ್ಲ.
ಮುಂದೇನು?
-ತೀರ್ಪು ಪ್ರಶ್ನಿಸಿ ಕೋರ್ಟ್‌ಗೆ ಮೊರೆ ಸಾಧ್ಯತೆ
-ಅನರ್ಹತೆ ಆತಂಕದಿಂದ ಅತೃಪ್ತರು ಮರಳಿ ಕಾಂಗ್ರೆಸ್-ಜೆಡಿಎಸ್‌ಗೆ ಬರುವ ನಿರೀಕ್ಷೆ -ಅತೃಪ್ತರು ವಾಪಸ್ ಬರದಂತೆ ನೋಡಿಕೊಂಡು ಇರುವ ಸಂಖ್ಯಾಬಲದಡಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಬಿಜೆಪಿ ಹಕ್ಕು ಮಂಡಿಸಬಹುದು
-ವಿಧಾನಸಭೆ ಕೆಲ ಕಾಲ ಅಮಾನತ್ತಿಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬಹುದು
-ಅನರ್ಹತೆ ಆತಂಕದಿಂದ ಅತೃಪ್ತರು ಮರಳಿ ಕಾಂಗ್ರೆಸ್-ಜೆಡಿಎಸ್‌ಗೆ ಬರುವ ನಿರೀಕ್ಷೆ -ಅತೃಪ್ತರು ವಾಪಸ್ ಬರದಂತೆ ನೋಡಿಕೊಂಡು ಇರುವ ಸಂಖ್ಯಾಬಲದಡಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಬಿಜೆಪಿ ಹಕ್ಕು ಮಂಡಿಸಬಹುದು
-ವಿಧಾನಸಭೆ ಕೆಲ ಕಾಲ ಅಮಾನತ್ತಿಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬಹುದು
ಅನರ್ಹತೆಗೆ ಕಾರಣ
ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ) ಇವರನ್ನು ಅನರ್ಹಗೊಳಿಸಿದ್ದು ಸದ್ಯದ ಬೆಳವಣಿಗೆಗಲ್ಲ. ಫೆಬ್ರವರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಇವರಿಬ್ಬರು ವಿಪ್ ಉಲ್ಲಂಘಿಸಿದ್ದರು. ಹೀಗಾಗಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಆರೋಪಿಸಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದರು. ಇದರ ಆಧಾರದಲ್ಲಿ ಅನರ್ಹ ಮಾಡಲಾಗಿದೆ.
ಪಕ್ಷೇತರ ಶಾಸಕ ಆರ್.ಶಂಕರ್ (ರಾಣೆಬೆನ್ನೂರು) ಅವರು ಜೂನ್ ತಿಂಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ತಾವು ಪ್ರತಿನಿಧಿಸಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದೇನೆ ಎಂದು ಪತ್ರ ನೀಡಿದ್ದು, ಆದಾದ ನಂತರ ಜುಲೈ ನಲ್ಲಿ ಮತ್ತೆ ರಾಜ್ಯಪಾಲರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಆನ್ವಯದಡಿ ಆನರ್ಹಗೊಳಿಸಲಾಗಿದೆ.