ಮಹಾಲಿಂಗಪುರ: ರನ್ನಬೆಳಗಲಿ ಗ್ರಾಮದ ರೈತರ ಬಹುದಿನದ ಬೇಡಿಕೆ ಮಹಾರಾಜಾ ಕೆರೆಗೆ ಸುಮಾರು 13.74 ಕೋಟಿ ರೂ. ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದರು.
ರನ್ನಬೆಳಗಲಿಯ ಪುರಾತನ ಮಹಾರಾಜಾ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 1920ನೇ ಇಸ್ವಿಯಲ್ಲಿ ರೈತರಿಂದ ಜಮೀನು ಪಡೆದು ಆಗಿನ ಬ್ರಿಟಿಷ್ ಸರ್ಕಾರ ಸುಮಾರು 107 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆ ನಿರ್ಮಿಸಿತ್ತು. ಕಾರಣಾಂತರದಿಂದ ಗಣರಾಜ್ಯದ ಸಂದರ್ಭದಲ್ಲಿ ಮುಧೋಳ ಮಹಾರಾಜರು ಖಾಸಗಿಯವರಿಗೆ ಪರಭಾರೆ ಮಾಡಿದ ಪ್ರಯುಕ್ತ ಸರ್ಕಾರದ ಆಸ್ತಿಯ ಜಾಗೆಯು ಖಾಸಗಿಯವರ ಪಾಲಾಗಿತ್ತು. ಅದನ್ನು ಸರ್ಕಾರ ಮರು ಪಡೆದು ಖಾಸಗಿಯವರಿಗೆ ಸರ್ಕಾರದ ಮಾದರಿಯಲ್ಲಿ ನ್ಯಾಯ ಒದಗಿಸಲು ಸನ್ನದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಖಾಸಗಿಯ ಜಮೀನ್ದಾರರು ಈ ಜಮೀನು ಮಾರಾಟ ಮಾಡಲು ಮುಂದೆ ಬಂದರೆ ಯಾರೂ ಈ ಜಮೀನನ್ನು ಖರೀದಿಸಲು ಮುಂದೆ ಬರಬೇಡಿ. ಕಾರಣ ರನ್ನ ಬೆಳಗಲಿಯ ಜನರ ಬಹುದಿನದ ಬೇಡಿಕೆ ಇದಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ 2018ರಂದು ನಾವು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೆ ಹಣ ಮಂಜೂರಾತಿ ಕುರಿತು ಉಲ್ಲೇಖ ಪ್ರತಿ ಬಂದಿದೆ ಎಂದರು.
13.74 ಕೋಟಿ ರೂ. ಮೊತ್ತದ ನಿರ್ಮಾಣ ಕಾಮಗಾರಿಗೆ ಕೆರೆಯ ರೇಖಾ ಅಂದಾಜು ಪತ್ರಿಕೆಯನ್ನು ಸಿದ್ಧಪಡಿಸಿ ಅನುದಾನವನ್ನು ಒದಗಿಸುವಂತೆ ಕೇಂದ್ರ ಕಚೇರಿಗೆ ಸಲ್ಲಿಸಿದ್ದಾರೆ. ಕಾರಣ ಇನ್ನು ಕೆಲವೇ ದಿನಗಳಲ್ಲಿ ಕೆರೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಕಲ್ಪಿಸಿ ಬೆಳಗಲಿಯ ಜನತೆಯ ಮತ್ತು ರೈತರ ಹಿತ ಕಾಪಾಡುವ ಕಾರ್ಯ ಮಾಡುವುದಾಗಿ ಶಾಸಕ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಆರ್.ಮಾಚಕನವರ, ಮುಧೋಳ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಆರ್.ಟಿ. ಪಾಟೀಲ, ಸಿದ್ದು ಪಾಟೀಲ, ಪಂಡಿತಪ್ಪ ಪೂಜಾರ, ಹಣಮಂತ ರಾಚಪ್ಪ ಕೊಣ್ಣೂರ, ಭೀಮಶಿ ಮಣ್ಣಿಕೇರಿ, ಚಿಕ್ಕಪ್ಪ ನಾಯಕ, ಶಿವನಗೌಡ ಪಾಟೀಲ, ರಾಚಪ್ಪ ಕೊಣ್ಣೂರ, ಹಣಮಂತ ಬಿರಾಜನವರ, ಮಹಾಲಿಂಗ ಪುರಾಣಿಕ, ಅಶೋಕ ಸಿದ್ದಾಪುರ, ರಾಜು ಇತಾಪಿ, ಗಂಗಪ್ಪ ಹಂಪಿಹೋಳಿ, ಬಾಲಪ್ಪ ಹಂಪಿಹೋಳಿ, ಪಾಂಡು ಸಿದ್ದಾಪುರ, ಮಹಾಲಿಂಗ ಶೇಗುಣಸಿ, ಪರಮಾನಂದ ಸಂಕ್ರಟ್ಟಿ, ಮಹಾಲಿಂಗ ಲಾಗದವರ, ರಾಮನಗೌಡ ಪಾಟೀಲ, ಲಕ್ಷ ್ಮಣ ಕಲ್ಲೊಳ್ಳೆಪ್ಪಗೋಳ, ಮಹಾದೇವ ಮುರನಾಳ, ಮಲ್ಲು ಕ್ವಾನ್ಯಾಗೋಳ, ಗಂಗಪ್ಪ ಗುಡ್ಲಾರ ಇತರರು ಇದ್ದರು.