Advertisement
ನಿಂಬಾಳದಿಂದ ಮಾದನಹಿಪ್ಪರಗಿ 12 ಕಿ.ಮೀ, ಚಲಗೇರಾ ಐದು ಕಿ.ಮೀ ದೂರವಾಗುತ್ತದೆ. ಈ ಭಾಗದಿಂದ ಕಾಲೇಜಿಗೆ ಬರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗ್ಗೆ 8:30ರ ಸುಮಾರಿಗೆ ಕಾಲ್ನಡಿಗೆಯಲ್ಲೇ ಮಾದನಹಿಪ್ಪರಗಿಗೆ ಹೊರಟರೆ ಸುಮಾರು 10ಗಂಟೆಗೆ ತಲುಪುತ್ತಾರೆ. ಸಂಜೆ ಕಾಲೇಜು ಮುಗಿದ ಮೇಲೆ ನಾಲ್ಕುವರೆ ಗಂಟೆಗೆ ಹೊರಟರೆ ಆರು ಗಂಟೆ ಮೇಲೆ ಮನೆಗೆ ತಲುಪುತ್ತಾರೆ. ಒಟ್ಟಿನಲ್ಲಿ ಓಡಾಟದಲ್ಲೇ ವಿದ್ಯಾರ್ಥಿಗಳು ಸುಸ್ತಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರಿಗೆ ಕಾಲೇಜು ಬಿಡುವಂತೆ ಮನೆಯಲ್ಲಿ ಪಾಲಕರು ಒತ್ತಡ ಹೇರುತ್ತಿದ್ದಾರೆ.
Related Articles
Advertisement
ವಿದ್ಯಾರ್ಥಿನಿಯರು ನಿಂಬಾಳ ಗ್ರಾಮದಿಂದ 12 ಕಿ.ಮೀ ನಡೆದುಕೊಂಡು ಕಾಲೇಜಿಗೆ ಹೋಗುವ ಸ್ಥಿತಿ ಇರುವುದು ನಿಜಕ್ಕೂ ಶೋಚನೀಯ. ಇದರಲ್ಲಿ ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ದಾರಿಯಲ್ಲಿ ಯಾವುದೇ ರೀತಿಯ ಘಟನೆಗಳು ಸಂಭವಿಸಿದರೆ ಘಟಕದ ವ್ಯವಸ್ಥಾಪಕರೆ ಕಾರಣವಾಗುತ್ತಾರೆ. -ಲಕ್ಷ್ಮಣ ತಳಕೇರಿ, ಗ್ರಾಪಂ ಸದಸ್ಯ, ನಿಂಬಾಳ
ಗ್ರಾ.ಪಂಪ್ರಯಾಣಿಕರು ಇಲ್ಲದ ಕಡೆಗೆ ಸಾರಿಗೆ ಬಸ್ಸುಗಳನ್ನು ಓಡಿಸುತ್ತಾರೆ.
ಶಿಕ್ಷಣ ಪಡೆಯಲು ಹಂಬಲಿಸುವ ವಿದ್ಯಾರ್ಥಿಗಳಿಗಾಗಿ ಒಂದು ಬಸ್‌ನ್ನು ಬಿಡುತ್ತಿಲ್ಲ. ಕೂಡಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ಬಸ್ ಓಡಿಸಬೇಕು. ಇಲ್ಲವಾದರೇ ಮಾದನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸಲಾಗುವುದು. -ಶಿವಲಿಂಗಪ್ಪ ದೊಡ್ಡಮನಿ, ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ
–ಪರಮೇಶ್ವರ ಭೂಸನೂರ