ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಂದು ಪತ್ತೆಯಾಗಿರುವ ಕೋವಿಡ್ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿ ( 01-08-2021, 00:00 ರಿಂದ 23:59ರ ವರೆಗೆ)ಯಲ್ಲಿ 1285 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 25 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರಕರಣಗಳ ಪ್ರಮಾಣ ಕಡಿಮೆಯಾಗಿದ್ದು, ಇಂದು 290 ಕೋವಿಡ್ ಕೇಸ್ ಪತ್ತೆಯಾಗಿವೆ.
ಇನ್ನು ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1383 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 2847627ಕ್ಕೆ ಏರಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-6 , ಬಳ್ಳಾರಿ -4, ಬೆಳಗಾವಿ-24, ಬೆಂಗಳೂರು ಗ್ರಾಮಾಂತರ-13, ಬೆಂಗಳೂರು ನಗರ-290, ಬೀದರ್-3, ಚಾಮರಾಜನಗರ-17, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-36, ಚಿತ್ರದುರ್ಗ-18, ದಕ್ಷಿಣ ಕನ್ನಡ-219, ದಾವಣಗೆರೆ-4, ಧಾರವಾಡ-8, ಗದಗ-9, ಹಾಸನ-91, ಹಾವೇರಿ-1, ಕಲಬುರಗಿ-5, ಕೊಡಗು-81, ಕೋಲಾರ-35, ಕೊಪ್ಪಳ-2, ಮಂಡ್ಯ-26, ಮೈಸೂರು-102, ರಾಯಚೂರು-1, ರಾಮನಗರ-3, ಶಿವಮೊಗ್ಗ-34, ತುಮಕೂರು-73, ಉಡುಪಿ-135, ಉತ್ತರ ಕನ್ನಡ-41, ವಿಜಯಪುರ-2, ಯಾದಗಿರಿ-1.