ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1224 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 22 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.25) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1668 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2885700ಕ್ಕೆ ತಲುಪಿದೆ.
ಇನ್ನು ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 19318 ಇವೆ. ಪಾಸಿಟಿವಿಟಿ ದರ 0.62 % ಹಾಗೂ ಡೆತ್ ರೇಟ್ 1.79 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-2, ಬಳ್ಳಾರಿ-3, ಬೆಳಗಾವಿ-19, ಬೆಂಗಳೂರು ಗ್ರಾಮಾಂತರ-13, ಬೆಂಗಳೂರು ನಗರ-309, ಬೀದರ್-0, ಚಾಮರಾಜನಗರ-6, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-28, ಚಿತ್ರದುರ್ಗ-10, ದಕ್ಷಿಣ ಕನ್ನಡ-217, ದಾವಣಗೆರೆ-11, ಧಾರವಾಡ-11, ಗದಗ-0, ಹಾಸನ-95, ಹಾವೇರಿ-3, ಕಲಬುರಗಿ-10, ಕೊಡಗು-41, ಕೋಲಾರ-17, ಕೊಪ್ಪಳ-2, ಮಂಡ್ಯ-38, ಮೈಸೂರು-102, ರಾಯಚೂರು-1, ರಾಮನಗರ-1, ಶಿವಮೊಗ್ಗ-42, ಉಡುಪಿ-130, ಉತ್ತರ ಕನ್ನಡ-48, ವಿಜಯಪುರ-3, ಯಾದಗಿರಿ-8.