ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೊಸ ಪ್ರಕರಣಗಳು ಸತತ ಮೂರನೇ ದಿನ ಇಳಿಕೆಯಾಗಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.0.6 ರಷ್ಟಿದೆ.
ಗುರುವಾರ 1,213 ಮಂದಿಗೆ ಸೋಂಕು ತಗುಲಿದ್ದು, 25 ಸೋಂಕಿತರು ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 1,206 ಮಂದಿ ಗುಣಮುಖ ರಾಗಿದ್ದಾರೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 8 ಸಾವಿರ (1.87 ಲಕ್ಷಕ್ಕೆ) ಹೆಚ್ಚಳವಾಗಿವೆ.
ಹೊಸ ಪ್ರಕರಣಗಳು 11 ಇಳಿಕೆಯಾಗಿದ್ದು, ಸೋಂಕಿತರ ಸಾವು ಮೂರು ಹೆಚ್ಚಳವಾಗಿವೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಮಾತ್ರ ಸತತ ಮೂರನೇ ದಿನ ಶೇ.0.6ರಷ್ಟಿದ್ದು, ಮರಣ ದರ ಶೇ.2 ಆಸುಪಾಸಿನಲ್ಲಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ ಹಿಂಸಾಚಾರ ಪ್ರಕರಣ: 9 ಪ್ರಕರಣ ದಾಖಲಿಸಿದ ಸಿಬಿಐ
ಗುರುವಾರ ಅತಿ ಹೆಚ್ಚು ಬೆಂಗಳೂರು ನಗರ 319, ದಕ್ಷಿಣ ಕನ್ನಡ 269, ಉಡುಪಿ 113, ಮೈಸೂರು 98, ಹಾಸನ 90 ಹಾಗೂ ಕೊಡಗು 65 ಮಂದಿಗೆ ಸೋಂಕು ತಗುಲಿದೆ. ಉಳಿದ ಜಿಲ್ಲೆಗಳಲ್ಲಿ 50 ಕ್ಕಿಂತ ಕಡಿಮೆ ಇವೆ. 9 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟಿದೆ. ಬಾಗಲಕೋಟೆ, ಬೀದರ್, ರಾಯಚೂರು ಹಾಗೂ ಯಾದಗಿರಿಯಲ್ಲಿ ಶೂನ್ಯವಿದೆ. ಸೋಂಕಿತರ ಸಾವು ಅತಿ ಹೆಚ್ಚು ದಕ್ಷಿಣ ಕನ್ನಡ 10 ಮೃತಪಟ್ಟಿದ್ದು, 20 ಜಿಲ್ಲೆಗಳಲ್ಲಿ ಸೋಂಕಿತರ ಸಾವಾಗಿಲ್ಲ.