ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಟೌನ್‌ಹಾಲ್ನ ಬಿ.ಜಿ.ಎಸ್. ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಆಶಾ ಕಾರ್ಯಕರ್ತೆಯರು ಜಿಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ಮಾತನಾಡಿ, ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಯಶಸ್ಸಿನ ಹಿಂದೆ ಆಶಾ ಕಾರ್ಯಕರ್ತೆಯರ ಶ್ರಮವಿದೆ. ಇವರ ಸೇವೆ ಗೌರವಿಸಿ ಆಂಧ್ರಪ್ರದೇಶದಲ್ಲಿ ಮಾಸಿಕ 10 ಸಾವಿರ ರೂ. ಗೌರವಧನ ನಿಗದಿಪಡಿಸಿದೆ. ರಾಜ್ಯದಲ್ಲಿಯೂ ಮಾಸಿಕ 12 ಸಾವಿರ ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ವೇತನ ಸಮಸ್ಯೆ: ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಮಾದರಿ ಆಶಾ ಸಾಫ್ಟ್ ವೇತನದಿಂದ ಕೆಲವು ಆಶಾ ಕಾರ್ಯಕರ್ತೆಯರಿಗೆ ಮೂರ್‍ನಾಲ್ಕು ತಿಂಗಳ ವೇತನ ಬಂದಿಲ್ಲ. ವೇತನ ಪದ್ಧತಿಯಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಪ್ರಯೋಗ ಮಾಡುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ವೇತನ ದೊರೆಯದೆ ತೊಂದರೆ ಯಾಗುತ್ತಿದೆ. ಈ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿದರು. ಆರ್‌ಸಿಎಚ್ ಹೊಸ ಪೋರ್ಟಲ್ ಜಾರಿ ಮಾಡಲು ಎರಡು ತಿಂಗಳು ಎಂದಿದ್ದರು. ಆದರೆ 9 ತಿಂಗಳು ಕಳೆದಿದೆ. ಆರ್‌ಸಿಎಚ್ ಪೋರ್ಟಲ್ನಿಂದ ಕೆಲಸ ಮಾಡಿದಷ್ಟು ವೇತನ ನೀಡುತ್ತಿಲ್ಲ. ಬದಲಾಗಿ ಮಾಸಿಕ ಕೇವಲ 300 ರೂ.ನಂತೆ ನೀಡಲು ನಿರ್ದೇಶಕರುಆದೇಶಿ ಸಿದ್ದಾರೆ. ಇದು ಖಂಡನೀಯ. ಕಾರ್ಯ ಕರ್ತೆಗೆ ಮಾಸಿಕ 3 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮತ್ತು ಆರ್‌ಸಿಎಚ್ ಅಧಿಕಾರಿ ಡಾ.ಕೇಶವ ರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಂಜುಳ, ಪದ್ಮರೇಖಾ, ಪುಷ್ಪಲತಾ, ವಸಂತ, ಲಕ್ಷಿ ್ಮೕ ವಿನೋದ, ಶಶಿಕಲಾ, ಯಶೋದಾ ಇದ್ದರು.