Advertisement

ವೃದ್ಧನಿಗೆ 12 ಲಕ್ಷ ರೂ. ವಂಚನೆ

05:14 PM Jun 02, 2021 | Team Udayavani |

ಹುಬ್ಬಳ್ಳಿ: ಧಾರವಾಡದ ವೃದ್ಧರೊಬ್ಬರಿಗೆ ಅಪರಿಚಿತನು ಸಿಮ್‌ ಕಾರ್ಡ್‌ ಕೆವೈಸಿ ಅಪ್‌ಡೇಟ್‌ ಮಾಡುವುದಾಗಿ ನಂಬಿಸಿ ಅವರ ಖಾತೆಯಿಂದ ಆನ್‌ಲೈನ್‌ ಮೂಲಕ 4,12,174ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

Advertisement

ಧಾರವಾಡದ ನಸಬಿ ಎಂಬುವರಿಗೆ ಅಪರಿಚಿತನು ಬಿಎಸ್ಸೆನ್ನೆಲ್‌ ಕೆವೈಸಿ ಪ್ರಧಾನ ಕಚೇರಿಯಿಂದ ಮಾತನಾಡುವುದಾಗಿ ನಂಬಿಸಿ, ಟೀಮ್‌ ವ್ಹೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಸಿದ್ದಾನೆ. ನಂತರ ನೆಟ್‌ಬ್ಯಾಂಕಿಂಗ್‌ ಯುಸರ್‌ ನೇಮ್‌ ಪಡೆದುಕೊಂಡು ಕ್ವಿಕ್‌ ಸಪೋರ್ಟ್‌ ಆ್ಯಪ್‌ ಸಹಾಯದಿಂದ ಅವರ ಯುಸರ್‌ ನೇಮ್‌ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಿಕೊಂಡು ಎಸ್‌ ಬಿಐ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.  ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ. ­

ರಿಫಂಡ್‌ ಹೆಸರಲ್ಲಿ ವಂಚನೆ: ನಗರದ ಓರ್ವರಿಗೆ ಅಪರಿಚಿತನು ಆನ್‌ಲೈನ್‌ ಮೂಲಕ ಪಾವತಿಸಿದ ಹಣ ರಿಫಂಡ್‌ ಮಾಡುವುದಾಗಿ ನಂಬಿಸಿ, ಅವರ ಖಾತೆಯ ವಿವರಗಳನ್ನು ಪಡೆದು ಆನ್‌ಲೈನ್‌ ಮುಖಾಂತರ 91,998 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ರಾಜಶೇಖರ ಎಂಬುವರಿಗೆ ಕರೆಮಾಡಿದ ಅಪರಿಚಿತನು ರಿಫಂಡ್‌ ಮಾಡುವುದಾಗಿ ಹೇಳಿ ಮೊಬೈಲ್‌ಗೆ ಕೆಲವು ಸಂದೇಶ ಕಳುಹಿಸಿ, ಅವುಗಳನ್ನು ಮರಳಿ ಬೇರೆ ಸಂಖ್ಯೆಗೆ ಪಾರ್ವರ್ಡ್‌ ಮಾಡಿಸಿಕೊಂಡು ಖಾತೆಯ ಮಾಹಿತಿ ಪಡೆದು ಗಮನಕ್ಕೆ ಬರದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿ ಕೊಂಡಿದ್ದಾನೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next