Advertisement

ಮಾರುಕಟ್ಟೆಯಲ್ಲೀಗ 12 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳು!

03:45 AM Mar 11, 2017 | Team Udayavani |

ನವದೆಹಲಿ: ಅಪನಗದೀಕರಣದ ಬಳಿಕ ಭಾರತದಲ್ಲಿ 500 ಹಾಗೂ 2 ಸಾವಿರ ಮುಖಬೆಲೆಯ ಒಟ್ಟು 12 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳು ಚಲಾವಣೆಯಲ್ಲಿವೆ!

Advertisement

ಸಂಸತ್‌ ಅಧಿವೇಶನದಲ್ಲಿ ಈ ಮಾಹಿತಿ ತೆರೆದಿಟ್ಟಿದ್ದು ವಿತ್ತ ಸಚಿವ ಅರುಣ್‌ ಜೇಟ್ಲಿ. “ಫೆ.24ರ ಮಾಹಿತಿಯಂತೆ ಒಟ್ಟು 11,64,100 ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಈ 14 ದಿನದಲ್ಲಿ ಅದು 12 ಲಕ್ಷ ಕೋಟಿ ದಾಟಿದೆ’ ಎಂದು ಹೇಳಿದ್ದಾರೆ. 

“ಎಲ್ಲ ನೋಟುಗಳ ಗುಣಮಟ್ಟ ಪರೀಕ್ಷೆ ಆಗಿದೆ. ನೋಟಿನ ತಯಾರಿಕೆ ಆಯಾ ಕಾಲದ ಕಾರ್ಮಿಕ ವೆಚ್ಚ, ತಂತ್ರಜ್ಞಾನ ಮತ್ತು ಸಾಮಗ್ರಿಯ ಗುಣಮಟ್ಟದ ಮೇಲೆ ಅವಲಂಬಿತ. ರದ್ದಾದ ಸಾವಿರ ನೋಟಿನ ತಯಾರಿಕೆಗೆ ಬಿದ್ದಷ್ಟೇ ವೆಚ್ಚ 2 ಸಾವಿರದ ನೋಟಿಗೆ ತಗುಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next