Advertisement

ನಿಲ್ಲಿಸಿದ ಕಾರಿನಲ್ಲಿದ್ದ 12ಲಕ್ಷ ರೂ. ಕದ್ದು ಪರಾರಿ

12:01 PM Dec 10, 2017 | Team Udayavani |

ಬೆಂಗಳೂರು: ಮಲ್ಲೇಶ್ವರ ಕ್ಲಬ್‌ ಬಳಿ ನಿಲ್ಲಿಸಿದ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು 12.49 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ವಿಮಾನ ಟಿಕೆಟ್‌ ಬುಕ್ಕಿಂಗ್‌ ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿರುವ ಪುಟ್ಟ ಬಸವರಾಜು ಎಂಬುವರು ಡಿ.7ರಂದು ಸಂಜೆ 7 ಗಂಟೆ ಸುಮಾರಿಗೆ ಗ್ರಾಹಕರಿಗೆ ದಾಖಲಾತಿಗಳನ್ನು ನೀಡಲು ಮಲ್ಲೇಶ್ವರಕ್ಕೆ ತೆರಳಿದ್ದರು.

Advertisement

7ನೇ ಕ್ರಾಸ್‌ನಲ್ಲಿರುವ ಮಲ್ಲೇಶ್ವರ ಕ್ಲಬ್‌ ಬಳಿ ತಮ್ಮ ಕಾರನ್ನು ಪಾರ್ಕ್‌ ಮಾಡಿ ಕೆಲಸದ ಮೇಲೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಕಾರಿನ ಬ್ಯಾಗ್‌ನಲ್ಲಿದ್ದ 5.35 ಲಕ್ಷ ರೂ. ನಗದು, 4.40 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಮೂರು ಎಟಿಎಂ ಕಾರ್ಡ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬಸವರಾಜು ಕೆಲಸ ಮುಗಿಸಿಕೊಂಡುವಾಪಾಸ್‌ ಬಂದಾಗ ಕಳ್ಳತನ ಗೊತ್ತಾಗಿದೆ. ಎಟಿಎಂ ಕಾರ್ಡ್‌ಗಳನ್ನು ಕದ್ದೊಯ್ದಿದ್ದ ದುಷ್ಕರ್ಮಿಗಳು ಕಾರ್ಡ್‌ ಹಿಂದೆ ಬರೆದಿದ್ದ ಪಿನ್‌ ನಂಬರ್‌ ಬಳಸಿ ಪುನ: 2.70 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಬಸವರಾಜು ಮಲ್ಲೇಶ್ವರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next