Advertisement

12 ಬ್ಲಾಕ್‌ ಮರಳುಗಾರಿಕೆ:  ಟೆಂಡರ್‌ ಪ್ರಕ್ರಿಯೆ ಮುಕ್ತಾಯ

12:50 AM Jan 28, 2019 | Team Udayavani |

ಉಡುಪಿ: ಎರಡು ಮತ್ತು ಮೂರನೇ ಹಂತದಲ್ಲಿ ಕರೆಯಲಾದ ತಲಾ 6 ಮರಳು ಬ್ಲಾಕ್‌ಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಗುತ್ತಿಗೆದಾರರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಮರಳು ದಿಬ್ಬ ತೆರವುಗೊಳಿಸಲು ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಕಾರ್ಯದರ್ಶಿಯಿಂದ ಅನುಮೋದನೆ ಪಡೆದ 7 ಮರಳು ದಿಬ್ಬಗಳಲ್ಲಿ 17,526.061 ಮೆ.ಟನ್‌ ಮರಳು ತೆಗೆಯಲು ಅವಕಾಶವಿದೆ. ಸೀತಾ
ನದಿ ಪಾತ್ರದ‌ಲ್ಲಿ ಗುರುತಿಸಿರುವ 2 ಮರಳು ದಿಬ್ಬಗಳಿಗೆ ಮೀನುಗಾರರಿಂದ ಆಕ್ಷೇಪಣೆ ಬಂದಿದ್ದು, ಇವುಗಳನ್ನು ಬಿಟ್ಟು ಉಳಿದ 5 ಮರಳು ದಿಬ್ಬಗಳಲ್ಲಿ 16,910.524 ಮೆ.ಟನ್‌ ಮರಳು ತೆಗೆಯಲು 45 ಮಂದಿಗೆ ಪರವಾನಿಗೆ ನೀಡಲಾಗಿದೆ.

ಅನುಮೋದನೆ ಬಾಕಿ
ಉಳಿದ ನದಿ ಪಾತ್ರಗಳಲ್ಲಿ ಬೆಥಮೆಟ್ರಿಕ್‌ ತಂತ್ರಾಂಶ ಮೂಲಕ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಸರ್ವೇ ನಡೆಸಿರುವ ಸುರತ್ಕಲ್‌ ಎನ್‌ಐಟಿಕೆ 8 ಮರಳು ದಿಬ್ಬಗಳಿಂದ ಒಟ್ಟು 13,86,479.045 ಮೆ.ಟನ್‌ ಮರಳನ್ನು ತೆಗೆಯಬಹುದೆಂದು ವರದಿ ನೀಡಿದೆ. ಜಿಲ್ಲಾ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ ಶಿಫಾರಸಿನೊಂದಿಗೆ ಜ. 8ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ 7 ಸದಸ್ಯರ ಸಮಿತಿ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು.

ಜಿಲ್ಲೆಯ ನಾನ್‌ ಸಿಆರ್‌ಝಡ್‌ ಪ್ರದೇಶ ದಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಯಂತೆ ಕನಿಷ್ಠ 5 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿರುವ ಬ್ಲಾಕ್‌ಗಳಿಗೆ ಅನುಮೋದನೆ ಲಭಿಸಿದೆ. ಇಲ್ಲಿ ಪರಿಸರ ನಿರ್ವಹಣಾ ಯೋಜನೆ ಅಗತ್ಯವಿಲ್ಲ. ಪರಿಸರ ಅನುಮತಿ ಪತ್ರ ಪಡೆದ ಅನಂತರ ಮರಳು ಗಣಿಗಾರಿಕೆ ಮಾಡಲು ಸರಕಾರ ಸಮ್ಮತಿಸಿದೆ. 7 ಮರಳು ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.

ನಿಯಮಾವಳಿಯಂತೆ ಟೆಂಡರ್‌-ಕಂ- ಹರಾಜು ಮೂಲಕ ಮರಳು ವಿಲೇವಾರಿ ಮಾಡಲು ಟೆಂಡರ್‌ ಕರೆಯಲಾಗಿದೆ. 11 ಬ್ಲಾಕ್‌ಗಳಿಗೆ 96 ಜನ ಟೆಂಡರ್‌ನಲ್ಲಿ ಭಾಗವಹಿಸಿದ್ದು, ಅದರಲ್ಲಿ 57 ಮಂದಿ 3 ವರ್ಷಗಳ ಐಟಿ ರಿಟರ್ನ್ಸ್ ಪ್ರತಿ ಸಲ್ಲಿಸಿಲ್ಲ. ಷರತ್ತುಗಳನ್ನು ಸಡಿಲಿಸುವಂತೆ ಡಿ. 28ರಂದು ಸರಕಾರಕ್ಕೆ ಪತ್ರ ಬರೆಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next