Advertisement

ಏರ್‌ಲೈನ್ಸ್‌ ಉದ್ಯೋಗ: ವಂಚಕರ ಸೆರೆ

07:56 PM Feb 05, 2022 | Team Udayavani |

ನವದೆಹಲಿ: ವಿವಿಧ ಏರ್‌ಲೈನ್ಸ್‌ಗಳಲ್ಲಿ ಕೆಲಸ ಕೊಡಿಸುವ ಸೋಗಿನಲ್ಲಿ 200ಕ್ಕೂ ಅಧಿಕ ಮಂದಿಗೆ ವಂಚಿಸಿದ್ದ 12 ಮಂದಿಯ ಗ್ಯಾಂಗ್‌ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಅವರಲ್ಲಿ 9 ಮಂದಿ ಮಹಿಳೆಯರು. ಶಾಂತಿ ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಗ್ಯಾಂಗ್‌ ತಾವು ಎಚ್‌ಆರ್‌ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಹಲವು ಏರ್‌ಲೈನ್‌ಗಳಿಗೆ ನೇಮಕಾತಿ ಮಾಡಿಸುತ್ತಿರುವುದಾಗಿ ತಿಳಿಸಿ, 200ಕ್ಕೂ ಅಧಿಕ ಮಂದಿಗೆ ಸಂದರ್ಶನ ನಡೆಸಿದ್ದಾರೆ.

ಇದನ್ನೂ ಓದಿ:ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ

ಅವರಿಂದ ಸಮವಸ್ತ್ರ ಶುಲ್ಕ, ನೋಂದಣಿ ಶುಲ್ಕ ಸೇರಿ ವಿವಿಧ ಶುಲ್ಕದ ಹೆಸರಿನಲ್ಲಿ ತಲಾ 12,250 ರೂ. ವಸೂಲಿ ಮಾಡಿದ್ದಾರೆ. ನಂತರ ಫೋನ್‌ ಸ್ವಿಚ್‌ ಆಫ್ ಮಾಡಿ ಕಾಣೆಯಾಗಿದ್ದಾರೆ. ವಂಚನೆಗೆ ಒಳಗಾದವರ ದೂರನ್ನು ಆಧರಿಸಿ, ಆರೋಪಿಗಳನ್ನು ಹುಡುಕಿ, ಬಂಧಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next