Advertisement

2 ಡೋಸ್‌ ನಡುವೆ 28 ದಿನಗಳ ಅಂತರಕ್ಕೆ ಶಿಫಾರಸು

04:48 PM Mar 16, 2022 | Team Udayavani |

ನವದೆಹಲಿ: 12ರಿಂದ 14 ವರ್ಷ ವಯೋಮಿತಿಯ ಮಕ್ಕಳಿಗೆ ಬುಧವಾರ (ಮಾ.16)ದಿಂದ ಕೊರ್ಬೆವ್ಯಾಕ್ಸ್‌ ಲಸಿಕೆ ವಿತರಣೆ ಆರಂಭವಾಗಲಿದ್ದು, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.

Advertisement

ಅದರಂತೆ, ಮೊದಲ ಮತ್ತು ಎರಡನೇ ಡೋಸ್‌ ನಡುವೆ 28 ದಿನಗಳ ಅಂತರ ಇರಬೇಕು ಎಂದು ಸೂಚಿಸಲಾಗಿದೆ.

2010ನೇ ಇಸವಿಯಲ್ಲಿ ಜನಿಸಿದವರು ಮತ್ತು ಈಗಾಗಲೇ 12 ವರ್ಷ ಪೂರ್ತಿಗೊಂಡವರು ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಕೋವಿನ್‌ ವೆಬ್‌ಸೈಟ್‌ನಲ್ಲಿ ಕುಟುಂಬ ಸದಸ್ಯರು ಹೊಂದಿರುವ ಖಾತೆಯ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು

ಇದೇ ವೇಳೆ, ಇತರ ಆರೋಗ್ಯ ಸಮಸ್ಯೆ (ಕೊ-ಮಾರ್ಬಿಡಿಟಿ) ಇಲ್ಲದೇ ಇರುವ 60 ವರ್ಷ ಮೇಲ್ಪಟ್ಟವರಿಗೆ ಕೂಡ ಲಸಿಕೆ ಹಾಕಿಸಿಕೊಳ್ಳಲು ಸೋಮವಾರ ಕೇಂದ್ರ ಸರ್ಕಾರ ಅನುವು ಮಾಡಿದೆ. ಜತೆಗೆ, ಮಕ್ಕಳಿಗೆ ಲಸಿಕೆ ನೀಡುವ ತಂಡಗಳಿಗೆ ಸೂಕ್ತ ತರಬೇತಿ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next