Advertisement
ಚಿಕ್ಕಹುಣಸೂರು ಡೀಡ್‌ಸಂಸ್ಥೆ ಆವರಣದಲ್ಲಿ ಸ್ವಿರ್ಜಲೆಂಡ್‌ನ ಸಿಯೋ ಕಿಡ್ಸ್‌ಸಂಸ್ಥೆ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆದಿವಾಸಿಗಳ ತಾಂತ್ರಿಕ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಮೈಸೂರು ಜಿಪಂ ಸಿಇಒ ಶಿವಶಂಕರ್ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಕ್ಷರವಾಹಿನಿ, ವಯಸ್ಕರ ಶಿಕ್ಷಣ, ಮುಂದುವರಿಕೆ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿ ಪ್ರತಿ ಹಳ್ಳಿ-ಹಾಡಿಗಳಲ್ಲಿ ಅಕ್ಷರಜಾnನ ಕಲಿಸುವ ಪ್ರಯತ್ನದಿಂದಾಗಿ ಇಂದು ಆದಿವಾಸಿಗಳಲ್ಲಿ ಪ್ರಶ್ನಿಸುವ ಮನೋಭಾವ, ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರಲ್ಲದೆ ವ್ಯವಹಾರ ಜಾnನವೂ ಬೆಳೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣದೊಂದಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಯೋಜನೆ ಜಾರಿಯಲ್ಲಿದೆ ಎಂದರು. ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಶ್ರೀಕಾಂತ್ ಮಾತನಾಡಿ, 35 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಇದ್ದು , ಡ್ರೆ„ವಿಂಗ್, ಹೊಲಿಗೆ, ಕಂಪ್ಯೂಟರ್ ಹಾಗೂ ಅತಿಥಿ ಸತ್ಕಾರ್ಯ ತರಬೇತಿ ನೀಡಲಾಗುವುದುದೆಂದರು.
ನೂತನ ಕಟ್ಟಡದ ಮಾನವ ಸಂಪನ್ಮೂಲ ಕೇಂದ್ರವನ್ನು ಪತ್ರಕರ್ತ ಅಂಶಿಪ್ರಸನ್ನಕುಮಾರ್ ಉದ್ಘಾಟಿಸಿದರು, ಇದೇ ಕಟ್ಟಡದಲ್ಲಿರುವ ಕಂಪ್ಯೂಟರ್ ಹಾಗೂ ವಾಹನಚಾಲನಾ ತರಬೇತಿ ಘಟಕಕ್ಕೆ ಸೈಮನ್ಸ್Õ ಕುಟುಂಬದವರು ಉಧಾ^ಟಿಸಿದರು.
ಡೀಡ್ ಸಂಸ್ಥೆಯ ಅಧ್ಯಕ್ಷ, ಆದಿವಾಸಿ ಮುಂದಾಳು ಹರ್ಷ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪರಿವರ್ತನಾ ಸಂಸ್ಥೆಯ ನಿರ್ದೇಶಕ ರಾಜೇಗೌಡ, ಜಿಪಂ ಮಾಜಿ ಸದಸ್ಯ ಡಿ.ಕೆ.ಕನುನ್ನೇಗೌಡ, ಜೆಡಿಎಸ್ ಮುಖಂಡ ಹರಿಹರ ಆನಂದಸ್ವಾಮಿ, ಬಸವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.