Advertisement

11.23 ಕೋ. ರೂ. ಮೌಲ್ಯದ ನಕಲಿ ನೋಟು ವಶಕ್ಕೆ

03:40 AM Jul 19, 2017 | Harsha Rao |

ಹೊಸದಿಲ್ಲಿ: ಕಪ್ಪುಹಣ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ 2016ರ ನ.8ರಂದು ನೋಟು ಅಮಾನ್ಯ ಘೋಷಣೆ ಮಾಡಿದ ಬಳಿಕ 11.23 ಕೋಟಿ ರೂ.ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಸಭೆಗೆ ಲಿಖೀತ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ 29 ರಾಜ್ಯಗಳಲ್ಲಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಇತ್ತೀಚೆಗಷ್ಟೇ ಆರ್‌ಬಿಐ ಬಿಡುಗಡೆ ಮಾಡಿರುವ ಆ್ಯಪ್‌ನಲ್ಲಿ 500 ರೂ. ಮತ್ತು 2 ಸಾವಿರ ರೂ. ಹೊಸ ನೋಟುಗಳ ಭದ್ರತಾ ವಿವರಗಳನ್ನು ಗಮನಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ ನೀಡಿರುವ ವರದಿ ಪ್ರಕಾರ ದೇಶದಲ್ಲಿ 1,57,797 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಮೌಲ್ಯವೇ 11.23 ಕೋಟಿ ರೂ. ಎಂದು ಜೇಟ್ಲಿ ಹೇಳಿದ್ದಾರೆ. 

Advertisement

ಲೂಟಿಯಿಂದ ಬ್ಯಾಂಕುಗಳಿಗೆ 180 ಕೋಟಿ ರೂ. ನಷ್ಟ: ಮೂರು ವರ್ಷಗಳ ಅವಧಿಯಲ್ಲಿ ದೇಶದ 51 ಬ್ಯಾಂಕ್‌ಗಳಲ್ಲಿ ನಡೆದ ದರೋಡೆ, ಲೂಟಿ, ಕಳ್ಳತನ ಪ್ರಕರಣಗಳಿಂದ 180 ಕೋಟಿ ರೂ. ನಷ್ಟವಾಗಿದೆ. ಈ ರೀತಿಯ 2,632 ಪ್ರಕರಣ ವರದಿಯಾಗಿದ್ದು,  ಎಸ್‌ಬಿಐಗೆ 30 ಕೋಟಿ ರೂ., ಬ್ಯಾಂಕ್‌ ಆಫ್ ಬರೋಡಾಗೆ 13 ಕೋಟಿ ರೂ. ನಷ್ಟವಾಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರು ರಾಜ್ಯಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next