Advertisement

ರಾಜ್ಯದಲ್ಲಿಂದು 1,121 ಕೋವಿಡ್‌ ಪಾಸಿಟಿವ್:‌ 9 ತಿಂಗಳ ಮಗು ಸೇರಿ 5 ಮಂದಿ ಸಾವು

08:55 PM Aug 16, 2022 | Shwetha M |

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 1,121 ಮಂದಿಗೆ ಕೊರೊನಾ ಪಾಸಿಟಿವ್‌ ವರದಿಯಾಗಿದ್ದು, ಕೋಲಾರದ 9 ತಿಂಗಳ ಹೆಣ್ಣು ಮಗು ಸೇರಿ ಒಟ್ಟು 5 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ರಾಜ್ಯದಲ್ಲಿ ಮಂಗಳವಾರ 14,766 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಶೇ.7.59  ಪಾಸಿಟಿವಿಟಿ ದರ ದಾಖಲಾಗಿದೆ. ಧಾರವಾಡ, ಬೆಂಗಳೂರು ನಗರ, ಕೋಲಾರ, ಬಾಗಲಕೋಟೆ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ. ನಾಲ್ಕು ಪ್ರಕರಣದಲ್ಲಿ ಸೋಂಕಿತರು ಸಾರಿ ಹಾಗೂ ಓರ್ವ ವ್ಯಕ್ತಿ ಐಎಲ್‌ಐ ಸಮಸ್ಯೆಯಿಂದ  ಬಳಲುತ್ತಿದ್ದರು. 1711 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರ 812, ಮೈಸೂರು, ಬಳ್ಳಾರಿ 33, ಬೆಳಗಾವಿ, ಬೆಂಗಳೂರು ಗ್ರಾಮಾಂತರ 23, ಕೊಡಗು 22, ಹಾಸನ 21, ಧಾರವಾಡ, ಶಿವಮೊಗ್ಗ 16, ಹಾವೇರಿ, ರಾಮನಗರ, ದಾವಣಗೆರೆ 13, ಚಿಕ್ಕಮಗಳೂರು 10, ಬಾಗಲಕೋಟೆ 9, ರಾಯಚೂರು, ಚಾಮರಾಜನಗರ 7,ದಕ್ಷಿಣ ಕನ್ನಡ, ಮಂಡ್ಯ, ಉತ್ತರಕನ್ನಡ, ವಿಜಯಪುರ 6, ಉಡುಪಿ 5, ಚಿತ್ರದುರ್ಗ, ತುಮಕೂರು, ಕಲಬುರಗಿ 4, ಕೋಲಾರ 3, ಕೊಪ್ಪಳ, ಯಾದಗಿರಿ, ಚಿಕ್ಕಬಳ್ಳಾಪುರ, ಗದಗ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next