Advertisement

Watch: ಟಾಟಾ ಸ್ಟೀಲ್ ಪ್ಲ್ಯಾಂಟ್ ನ 110 ಮೀಟರ್ ಎತ್ತರದ ಚಿಮಣಿ 11 ನಿಮಿಷಗಳಲ್ಲೇ ನೆಲಸಮ!

11:59 AM Nov 28, 2022 | Team Udayavani |

ಜೆಮ್ಶೆಡ್ ಪುರ: ಜೆಮ್ಶೆಡ್ ಪುರದಲ್ಲಿನ ಟಾಟಾ ಸ್ಟೀಲ್ ಪ್ಲ್ಯಾಂಟ್ ನಲ್ಲಿರುವ 110 (ಅಂದಾಜು 300 ಅಡಿಗಿಂತಲೂ ಎತ್ತರ) ಮೀಟರ್ ಎತ್ತರದ ಚಿಮಣಿಯನ್ನು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಒಳಸ್ಫೋಟದ ವಿಧಾನವನ್ನು ಅನುಸರಿಸಿ ನೆಲಸಮಗೊಳಿಸಿರುವುದಾಗಿ ಟಾಟಾ ಸ್ಟೀಲ್ ಪ್ಲ್ಯಾಂಟ್ ನ ಉಪಾಧ್ಯಕ್ಷ ಅವನೀಶ್ ಗುಪ್ತಾ ತಿಳಿಸಿದ್ದಾರೆ.

Advertisement

ಜೆಮ್ಶೆಡ್ ಪುರದ ಟಾಟಾ ಸ್ಟೀಲ್ ಪ್ಲ್ಯಾಂಟ್ ನಲ್ಲಿರುವ 27 ವರ್ಷ ಹಳೆಯ 110 ಮೀಟರ್ ಎತ್ತರದ ಚಿಮಣಿಯನ್ನು ಒಳಸ್ಫೋಟದ ವಿಧಾನದ ಮೂಲಕ ಸ್ಫೋಟಗೊಳಿಸಿ ಕೆಡವಲಾಗಿದೆ. ಇದು ಪರಿಸರ ಸ್ನೇಹಿ ಮತ್ತು ಸಮಯದ ಉಳಿತಾಯಕ್ಕೆ ಹೆಚ್ಚು ಪೂರಕವಾಗಿದೆ. ಕೇವಲ 11 ಸೆಕೆಂಡ್ಸ್ ಗಳಲ್ಲಿ ಬೃಹತ್ ಎತ್ತರದ ಚಿಮಣಿಯನ್ನು ಕೆಡವಿ ಹಾಕಲಾಯಿತು.

ಯೋಜನೆಯಂತೆ ಟಾಟಾ ಸ್ಟೀಲ್ ಪ್ಲ್ಯಾಂಟ್ ನಲ್ಲಿನ ಚಿಮಣಿಯನ್ನು ಕೆಡವಿ ಹಾಕಲಾಗಿದ್ದು, ಯಾವುದೇ ಜೀವಹಾನಿ, ನಷ್ಟ ಸಂಭವಿಸಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.


ಜೆ ಡೆಮೊಲಿಷನ್ ಕಂಪನಿ ಬೆಂಬಲಿತ ಎಡಿಫೈಸ್ ಎಂಜಿನಿಯರಿಂಗ್ ಇಂಡಿಯಾಕ್ಕೆ ಚಿಮಣಿಯನ್ನು ಧ್ವಂಸಗೊಳಿಸುವ ಕೆಲಸವನ್ನು ವಹಿಸಿಕೊಡಲಾಗಿತ್ತು. ಇದೇ ಕಂಪನಿ ಆಗಸ್ಟ್ 28ರಂದು ನೋಯ್ಡಾದಲ್ಲಿನ ಅವಳಿ ಟವರ್ ಅನ್ನು ಕೆಲವೇ ಸೆಕೆಂಡ್ಸ್ ಗಳಲ್ಲಿ ಧ್ವಂಸಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next