Advertisement

ಭೂಮಿಯ ಸನಿಹಕ್ಕೆ 3 ಕ್ಷುದ್ರ ಗ್ರಹ; ನಾಸಾ

11:44 AM Aug 13, 2022 | Shreeram Nayak |

ವಾಷಿಂಗ್ಟನ್‌: ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಮೂರು ಕ್ಷುದ್ರ ಆಕಾಶ ಕಾಯಗಳು ಭೂಮಿಗೆ ಅತೀ ಸನಿಹವಾಗಿ ಹಾದುಹೋಗಲಿವೆ. ಇವುಗಳಲ್ಲಿ ಅತೀ ದೊಡ್ಡದಾಗಿರುವ 110 ಅಡಿ ಅಗಲದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಪ್ಯಾರಿಸ್‌ನಷ್ಟು ದೊಡ್ಡದಾದ ಕುಳಿ ಉಂಟಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

Advertisement

ಆದರೆ ಅಪ್ಪಳಿಸುವ ಸಾಧ್ಯತೆ ಅತ್ಯಲ್ಪ. ಈ ಕ್ಷುದ್ರ ಕಾಯ ರವಿವಾರ ಬೆಳಗ್ಗೆ ಭೂಮಿಯಿಂದ 47 ಲಕ್ಷ ಕಿ.ಮೀ. ದೂರದಲ್ಲಿ ಪ್ರತೀ ಸೆಕುಂಡಿಗೆ 5.7 ಕಿ.ಮೀ. ವೇಗದಲ್ಲಿ ಹಾದುಹೋಗಲಿದೆ.

ಆಸ್ಟರಾಯ್ಡ ವಾಚ್‌ ನಿಗಾ: ನಾಸಾದ ಆಸ್ಟರಾಯ್ಡ ವಾಚ್‌ ಭೂಮಿಗೆ 75 ಲಕ್ಷ ಕಿ.ಮೀ. ಆಸುಪಾಸಿಗೆ ಬರುವ ಕ್ಷುದ್ರಗ್ರಹ, ಧೂಮಕೇತುಗಳ ಬಗ್ಗೆ ನಿಗಾ ಇರಿಸುತ್ತದೆ. ಭೂಮಿಯಿಂದ ಇಷ್ಟು ದೂರದಲ್ಲಿ ಹಾದುಹೋಗುವ 150 ಮೀ.ಗಳಿಗಿಂತ ದೊಡ್ಡದಾದ ಕ್ಷುದ್ರಕಾಯಗಳನ್ನು “ಅಪಾಯಕಾರಿ’ ಎಂದು ಗುರುತಿಸಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next