ಬೆಂಗಳೂರು: ರಾಜ್ಯದಲ್ಲಿ ಇಂದು 11 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಎಂಟು ಪ್ರಕರಣಗಳು ಮಂಡ್ಯ ಜಿಲ್ಲೆಯಿಂದಲೇ ವರದಿಯಾಗಿದೆ.
ಮಂಡ್ಯದಲ್ಲಿ ಮೂರು ಪ್ರಕರಣ, ಕೆ ಆರ್ ಪೇಟೆಯಲ್ಲಿ ಒಂದು ಪ್ರಕರಣ, ಮಳವಳ್ಳಿಯಲ್ಲಿ ನಾಲ್ಕು ಸೋಂಕು ಪ್ರಕರಣಗಳು ದೃಢವಾಗಿದೆ.
ಬೆಳಗಾವಿ ರಾಯಭಾಗದ ಸೋಂಕಿತರ ಪಟ್ಟಿಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಸೋಂಕಿತ ಸಂಖ್ಯೆ 301ರ ಸಂಪರ್ಕದಿಂದ ಮೂವರಿಗೆ ರಾಯಭಾಗ ದಲ್ಲಿ ಸೋಂಕು ದೃಢವಾಗಿದೆ.
ಮುಂಬೈ ಪ್ರಯಾಣದ ಹಿನ್ನಲೆ ಹೊಂದಿರುವ ಮಂಡ್ಯದ ಮೂವರಿಗೆ ಸೋ ಕು ತಾಗಿದೆ. ಇವರಿಗೆ ಮಂಡ್ಯದ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತ ಸಂಖ್ಯೆ 566, 567, 568ರ ಸಂಪರ್ಕದಿಂದ ಕೆ ಆರ್ ಪೇಟೆಯ 30 ವರ್ಷದ ಮಹಿಳೆಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 179ರ ಸಂಪರ್ಕದಿಂದ ಮಳವಳ್ಳಿಯ ನಾಲ್ವರಿಗೆ ಸೋಂಕು ತಾಗಿರುವುದು ಪರೀಕ್ಷೆಯಿಂದ ದೃಢವಾಗಿದೆ.
ರಾಜ್ಯದಲ್ಲಿ ಇದುವರೆಗೆ ಒಟ್ಟು 576 ಜನರಿಗೆ ಸೋಂಕು ತಾಗಿದ್ದು, ಅದರಲ್ಲಿ 235 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತು 22 ಪ್ರಕರಣಗಳು ಮರಣ ಹೊಂದಿದ್ದು, ಒಂದು ಮರಣ ಕೋವಿಡ್-19 ಅಲ್ಲದ ಕಾರಣದಿಂದ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.