Advertisement
ನಗರದ ರೋಟರಿ ಭವನದಲ್ಲಿ ತಾಲೂಕು ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 10ನೇಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾನವ ಕುಲಂ ತಾನೊಂದೆ ವಲಂ ಎಂದು ಹತ್ತನೇಶತಮಾನದಲ್ಲಿಯೇ ಏಕತೆಯನ್ನು ಸಾರಿದ ಆದಿಕವಿ ಪಂಪನಿಂದ ಪ್ರಾರಂಭವಾದ ಕನ್ನಡ ಭಾಷಾ ಸಾಹಿತ್ಯ ವಾಹಿನಿ. ಒಂಭತ್ತು ಶತಮಾನಗಳ ಅವಧಿಯಲ್ಲಿ ಜೈನ ಯುಗ. ಶೈವಯುಗ ಮತ್ತು ವೈಷ್ಣವ ಯುಗವನ್ನು ಕಾಣಿಸಿದೆ ಎಂಬುದು ಗಮನಾರ್ಹ ಬೆಳವಣಿಗೆ ಎಂದರು.
Related Articles
Advertisement
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಿರಣಗೆರೆ ಜಗದೀಶ್ ಮಾತನಾಡಿ, ಎಲ್. ನರಸಿಂಹಯ್ಯ ಮಕ್ಕಳಿಗೆ ಬಹಳ ನೆಚ್ಚಿನ ಗುರುಗಳಾಗಿದ್ದರು. ಮಕ್ಕಳಿಗೆ ವಾರ್ತೆಗಳನ್ನು ಓದುವ ಹವ್ಯಾಸ ಬೆಳೆಸಿ ಅವರಿಗೆವೇದಿಕೆ ಅಲ್ಲಿ ನಿಂತು ಮಾತನಾಡುವ ಶಕ್ತಿತುಂಬುತ್ತಿದ್ದರು ಎಂದು ಸ್ಮರಿಸಿಕೊಂಡರು.
ಪುಸ್ತಕ ಓದುವ ಅಭ್ಯಾಸ ಬೆಳೆಸಿ: ಜಯಲಕ್ಷ್ಮೀ :
ನರಸಿಂಹಯ್ಯ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕನ್ನಡ ನಾಡಿಗೆ ಸಂದ ಗೌರವ. ಇವರ ಶಿಷ್ಯಂದಿರು ಪ್ರಪಂಚದಾದ್ಯಂತ ಉತ್ತಮ ಸ್ಥಾನಮಾನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಪಿಜಿಆರ್ ಸಿಂಧ್ಯಾ ಅವರಿಗೂ ಇವರು ಗುರುಗಳಾಗಿದ್ದರು. ಇವರನ್ನು ಮಾದರಿಯಾಗಿಟ್ಟುಕೊಂಡು ಅನೇಕರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಬರವಣಿಗೆ ಅಭ್ಯಾಸವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಕಲಿಸಿಕೊಡಬೇಕು. ಜೊತೆಗೆ ಪುಸ್ತಕ ಓದುವ ಅಭ್ಯಾಸ ಬೆಳೆಸಬೇಕು. ಮಕ್ಕಳು ತಪ್ಪು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಹೇಳಿದರು.
ಮಕ್ಕಳನ್ನು ಕನ್ನಡದಿಂದ ದೂರಸರಿಸುವ ಯತ್ನ :
ಕನ್ನಡ ಭಾಷೆ ಅಗತ್ಯ, ಆದ್ಯತೆಯ ಭಾಷೆಯಾಗಿ ಶಾಲಾ ಶಿಕ್ಷಣದಲ್ಲಿ ಕಂಡುಬರುತ್ತಿಲ್ಲ. ಹಿರಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಕನ್ನಡ ಅಗತ್ಯ ಭಾಷೆ ಆಗಬೇಕಿತ್ತು. ಗ್ರಾಮಾಂತರ ಕನ್ನಡ ಶಾಲೆಗಳಲ್ಲಿ ಕನ್ನಡ ಅಗತ್ಯ ಭಾಷೆಯಾಗಿದೆ. ಆದರೆ, ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಮತ್ತು ಕೆಲವು ವಿದ್ಯಾವಂತ, ಸ್ಥಿತಿವಂತ ಪೋಷಕರಿಂದ ಮಕ್ಕಳನ್ನು ಕನ್ನಡದಿಂದ ದೂರ ಸರಿಸುವ ವಿದ್ಯಮಾನ ನಡೆಯುತ್ತದೆ. ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದು ಕನ್ನಡ ಪ್ರಥಮ ಭಾಷೆ ಮತ್ತು ಕನ್ನಡ ಮಾಧ್ಯಮದಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ವಿಭಾಗದಲ್ಲಿ ಮತ್ತು ಸರ್ಕಾರದ ಉದ್ಯೋಗಗಳಲ್ಲಿ ಆದ್ಯತೆ ನೀಡಿ ಪ್ರೋತ್ಸಾಹಿಸಿದರೆ ಅವರ ಅನುಕೂಲದ ಜೊತೆಗೆ ಭಾಷೆಗೂ ಅಗತ್ಯತೆ ಕಲ್ಪಿಸಿದಂತಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್. ನರಸಿಂಹಯ್ಯ ಅಭಿಪ್ರಾಯಪಟ್ಟರು.