ಆಳಂದ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಧಿಕಾರಿ ಗುರಣ್ಣ ಗುಂಡಗುರತಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ತಾಲೂಕಿನ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ನಡೆದ ಹತ್ತರ ಭಯ ಹತ್ತಿರ ಬೇಡ ಕಾರ್ಯಕ್ರಮದ ಅಂಗವಾಗಿ ಹತ್ತನೇ ತರಗತಿ ಫಲಿತಾಂಶ ಸುಧಾರಣೆ ಅಡಿ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಹತ್ತನೇ ತರಗತಿ ಮಕ್ಕಳಿಗೆ ತರಗತಿ ಪ್ರಾರಂಭ ಮತ್ತು ನಂತರ ವಿಶೇಷ ಕಾಳಜಿ ವಹಿಸುವ ಮೂಲಕ ಪರಿಣತರಿಂದ ವಿಷಯವಾರು ಪಾಠ ಬೋಧಿಧಿಸಿ ಅಂಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆಯುವುದರ ಜತೆಗೆ ಶಾಲೆಗಳ ಫಲಿತಾಂಶದಲ್ಲಿ ಸಾಧನೆ ಆಗುವಂತೆ ನೋಡಿಕೊಳ್ಳಬೇಕು. ಈಗಾಗಲೇ ಬೋಧಿಧಿಸಿದ ಪಾಠಗಳ ಪುನರಮನನ ಮಾಡಿಕೊಡುವಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಹೇಳಿದರು.
ತಾಲೂಕು ನೋಡಲ್ ಅಧಿಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಎಸ್.ಪಿ. ಸುಳ್ಳದ ಮಾತನಾಡಿ, 10ನೇ ತರಗತಿ ಫಲಿತಾಂಶ ಸುಧಾರಣೆಗೆ ಸರ್ಕಾರ ಮತ್ತು ಮೇಲಾಧಿಕಾರಿಗಳು ವಿಶೇಷ ಒತ್ತುಕೊಟ್ಟಿದ್ದಾರೆ.
ಪರೀಕ್ಷೆಗೆ ಇನ್ನೂ 25 ದಿನ ಬಾಕಿ ಇರುವ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಮಕ್ಕಳ ಪರೀûಾ ಫಲಿತಾಂಶ ಸುಧಾರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಪ್ರಭಾರಿ ಸಮನ್ವಯಾಧಿಧಿಕಾರಿ ಶ್ರೀಮಂತ ಜಿಡ್ಡೆ, ಅಕ್ಷರ ದಾಸೋಹ ಅಧಿಧಿಕಾರಿ ಠಾಕ್ರು ಚವ್ಹಾಣ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಇದ್ದರು.