ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 108 ರಿಂದ 114 ಸ್ಥಾನ ಗೆಲ್ಲಲಿದೆ ಎಂದು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ಮಾಡಿದ ಸಮೀಕ್ಷೆ ತಿಳಿಸಿದೆ.
ಹೈದರಾಬಾದ್ ಮೂಲದ ಇಂಡಿನ್ ಪೊಲಿಟಿಕಲ್ ಸರ್ವೇ ಆ್ಯಂಡ್ ಸ್ಟಾಟರ್ಜಿ ಟೀಮ್ (ಎಸ್‌ಎಸ್‌ಎಸ್ ಗ್ರೂಪ್) ಮಾಡಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ತಿಳಿಸಿದ್ದು ಬಹಿರಂಗವಾಗಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಲಿದ್ದು, ಕಾಂಗ್ರೆಸ್ 108-114 , ಬಿಜೆಪಿ 65-76, ಜೆಡಿಎಸ್ 24-30 ಸ್ಥಾನ ಹಾಗೂ ಇತರರು 7 ಸ್ಥಾನ ಗೆಲ್ಲಲಿದ್ದಾರೆ ಎಂದು ತಿಳಿಸಲಾಗಿದೆ.
ವಿವಿಧ ಸಮುದಾಯಗಳ ಮತದಾರರ ಮಾದರಿ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬರಲಿದೆ. ಒಟ್ಟಾರೆ ಶೇ.40ರಷ್ಟು ಕಾಂಗ್ರೆಸ್, ಶೇ.34 ಬಿಜೆಪಿ, ಶೇ.17ರಷ್ಟು ಜೆಡಿಎಸ್ ಮತ ಪಡೆಯಲಿದೆ.
Related Articles
ಹಳೆ ಮೈಸೂರಿನಲ್ಲಿ ಕಾಂಗ್ರೆಸ್ 24ರಿಂದ 25, ಬಿಜೆಪಿ 10ರಿಂದ 14, ಜೆಡಿಎಸ್ 21ರಿಂದ 22. ಮುಂಬಯಿ ಕರ್ನಾಟಕದಲ್ಲಿ ಕಾಂಗ್ರೆಸ್ 27ರಿಂದ 28, ಬಿಜೆಪಿ 14ರಿಂದ 16, ಜೆಡಿಎಸ್- 7ರಿಂದ 8, ಕರಾವಳಿ ಭಾಗದಲ್ಲಿ ಬಿಜೆಪಿ 12ರಿಂದ 13, ಕಾಂಗ್ರೆಸ್ 7ರಿಂದ 8, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ 21ರಿಂದ 22, ಬಿಜೆಪಿ 12ರಿಂದ 14, ಜೆಡಿಎಸ್ 1ರಿಂದ 3 ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿ 12ರಿಂದ 14, ಕಾಂಗ್ರೆಸ್ 16ರಿಂದ 17, ಜೆಡಿಎಸ್ 1 ಸ್ಥಾನ ಗೆಲ್ಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.