Advertisement
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡದಲ್ಲಿ 108 ವಾಹನದ ಸಿಬಂದಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಕೆಲವು ತಿಂಗಳುಗಳ ಕಾಲ ಅವರು ಅಲ್ಲಿ ವಾಸಿಸಿದ್ದರು. ಆದರೆ ಈಗ ಅವರು ಬೆಳ್ಳಾರೆಯಲ್ಲಿ ವಾಹನವನ್ನು ನಿಲ್ಲಿಸಿ, ಬೇರೆಡೆಗೆ ಮಲಗಲು ಹೋಗು ತ್ತಾರೆ. ಇದರಿಂದ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ರೋಗಿಗಳಿಗೆ ಅಲಭ್ಯ ವಾಗಿದೆ. ಇದರಿಂದ ಸ್ಥಳೀಯರು ಸಂಕಷ್ಟ ಪಡುವಂತಾಗಿದೆ ಎಂಬುದು ನಾಗರಿಕರ ಆಕ್ರೋಶ.
ಈಗ ರಾತ್ರಿ ತುರ್ತುಗಾಗಿ ಆ್ಯಂಬುಲೆನ್ಸ್ ಬೇಕಾದರೆ ಸುಳ್ಯವನ್ನೇ ಆಶ್ರಯಿಸಬೇಕಿದೆ. ಕೆಲವೊಮ್ಮೆ ತುರ್ತು ಚಿಕಿತ್ಸೆ ಅಗತ್ಯ ವಿರುವವರಿಗೆ ಕಷ್ಟವಾಗುತ್ತಿದೆ. ಜತೆಗೆ ವಾಹನದ ಇಂಧನ, ಸಮಯವೂ ಹಾಳಾ ಗುತ್ತಿದೆ. ಹೋರಟಕ್ಕೆ ಸಂದ ಜಯ
ಬೆಳ್ಳಾರೆಗೆ 108 ಆ್ಯಂಬುಲೆನ್ಸ್ ಬೇಕೆಂದು ಸ್ಥಳೀಯರು ಹಲವು ಬಾರಿ ಆಗಿನ ಆರೋಗ್ಯ ಮಂತ್ರಿಗೆ, ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಆ್ಯಂಬುಲೆನ್ಸ್ ಸೇವೆ ಬೇಕೆಂದು ಸಣ್ಣ ಮಟ್ಟಿನ ಹೋರಾಟವೇ ನಡೆದಿತ್ತು. ಇದರ ಫಲವಾಗಿ ಆ್ಯಂಬು ಲೆನ್ಸ್ ಸೇವೆ ದೊರೆಯಿತು. ಆದರೆ ಈಗ ಆ ಸೇವೆ ಕೆಲವೇ ಗಂಟೆಗಳಿಗೆ ಸೀಮಿತವಾಗಿರುವುದು ಸ್ಥಳೀಯರಿಗೆ ನಿರಾಶೆಯನ್ನುಂಟು ಮಾಡಿದೆ.
Related Articles
ಸಿಬಂದಿ ಉಳಿಯುತ್ತಿದ್ದ ಕಟ್ಟಡದ ನೀರು ಮತ್ತು ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತ ಗೊಂಡಿದೆ. ಈ ಬಗೆY ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
Advertisement
ಖಾಸಗಿ ನಿರ್ವಹಣೆ108 ಆ್ಯಂಬುಲೆನ್ಸ್ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಅವರಿಗೆ ಬೆಳ್ಳಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಟ್ಟದಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿತ್ತು. ಸಂಬಂಧಪಟ್ಟವರಿಗೆ ನಾನು ಮನವರಿಕೆ ಮಾಡುತ್ತೇನೆ.
– ಡಾ| ಸುಬ್ರಹ್ಮಣ್ಯ ತಾಲೂಕು ವೈದ್ಯಾಧಿಕಾರಿ, ಸುಳ್ಯ