ಬೆಂಗಳೂರು: 103 ವರ್ಷದ ಜಿ. ಕಾಮೇಶ್ವರಿ ಕೋವಿಡ್ ಲಸಿಕೆ ಪಡೆದ ದೇಶದ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದಲ್ಲಿ ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿತ್ತು. ಇದೀಗ ಬೆಂಗಳೂರಿನ 103 ವರ್ಷ ವಯಸ್ಸಿನ ಜೆ ಕಾಮೇಶ್ವರಿ ಕೋವಿಡ್ ಲಸಿಕೆ ಪಡೆದ ಅತೀ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ.
ಅಪೊಲೋ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ನಂತರ ಕಾಮೇಶ್ವರಿಯವರ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ ಎಂದು ವರದಿಯಾಗಿದೆ. ಲಸಿಕೆ ಪಡೆಯುವಾಗ ಕಾಮೇಶ್ವರಿಯವರ 77 ವರ್ಷದ ಪುತ್ರ ಕೂಡ ಜೊತೆಗಿದ್ದರು.
ಇದನ್ನೂ ಓದಿ: ಚುಟುಕಾದ ಟೆಸ್ಟ್: ಅತೀ ಕಡಿಮೆ ಅವಧಿಯಲ್ಲಿ ಮುಗಿದ 5 ಪಂದ್ಯಗಳ ಮಾಹಿತಿ ಇಲ್ಲಿದೆ
ಇದಕ್ಕೂ ಮೊದಲು ಮುಂಬೈನ 100 ವರ್ಷದ ಶಶಿಕಲಾ ಜೋಶಿ ಕೋವಿಡ್ ಲಸಿಕೆ ಪಡೆದ ಅತೀ ಹಿರಿಯ ಮಹಿಳೆ ಎನಿಸಿಕೊಂಡಿದ್ದರು. ಮಂಗಳವಾರ( ಮಾ.9) ನೊಯ್ಡಾದ 103 ವರ್ಷದ ವೃದ್ಧರೊಬ್ಬರೂ ಕೂಡ ಲಸಿಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮಹಾಬೀರ್ ಪ್ರಸಾದ್ ಮಹೇಶ್ವರಿ ಎಂಬ ವ್ಯಕ್ತಿ ತಮ್ಮ ಪುತ್ರ 81 ವರ್ಷದ ಸುದರ್ಶನ್ ದಯಾಳ್ ಜೊತೆಗೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಸ್ಯಾಟಲೈಟ್ ಮ್ಯಾನ್’ ಉಡುಪಿ ರಾಮಚಂದ್ರರಾವ್ ಅವರ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ