Advertisement

Temple Run: ಮತ್ತೆ ಮೋದಿ ಪ್ರಧಾನಿ ಆಗಬೇಕೆಂದು ಶತಾಯುಷಿ ಅಜ್ಜಿಯ ಟೆಂಪಲ್ ರನ್…

03:44 PM Mar 25, 2024 | Team Udayavani |

ಚಿಕ್ಕಮಗಳೂರು: ದೇಶ ಒಳ್ಳಯೆಯಾದಾಗಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಶತಾಯುಷಿ ಅಜ್ಜಿಯೊಬ್ಬರು ಟೆಂಪಲ್ ರನ್ ಮಾಡುತ್ತಿದ್ದಾರೆ.

Advertisement

ಅಂದಹಾಗೆ ಶತಾಯುಷಿ ಅಜ್ಜಿ ಶಿವಮ್ಮಗೆ ಈಗ 102 ವರ್ಷ ವಯಸ್ಸು,

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ ತುಮಕೂರಿನ ಶತಾಯುಷಿ ಶಿವಮ್ಮ ಅವರು ರಂಭಾಪುರಿ ಶ್ರೀಗಳ ದರ್ಶನ ಮಾಡಿ ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಮಳೆ -ಬೆಳೆ ಇಲ್ಲ, ದೇಶದ ಜನ ಸಮಸ್ಯೆಯಲ್ಲಿದ್ದಾರೆ, ಕಾಡು ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿವೆ. ದೇಶಕ್ಕೆ ಮೋದಿ ಪ್ರಧಾನಿಯಾದರೆ ಮಳೆ-ಬೆಳೆ ಚೆನ್ನಾಗಿ ಆಗಿ ದೇಶ ಸುಭಿಕ್ಷವಾಗಿರುತ್ತೆ ಎಂದು ಹೇಳಿದರು.

ನನ್ನ ಸ್ವಾರ್ಥಕ್ಕಾಗಿ ಏನೂ ಇಲ್ಲ… ಸ್ವಾರ್ಥಕ್ಕೆ ಹೇಳ್ತಿಲ್ಲ, ದೇಶ ಚೆನ್ನಾಗಿ ಇರಬೇಕು, ಜನ ಚೆನ್ನಾಗಿ ಇರಬೇಕು ಅಂದ್ರೆ ದೇಶಕ್ಕೆ ಮೋದಿ ಬೇಕು, ದೇವರ ಬಳಿ ನನಗಾಗಿ ಏನನ್ನು ಕೇಳಿಕೊಂಡಿಲ್ಲ, ದೇಶ, ಮೋದಿಗಾಗಿ ಬೇಡಿದ್ದೇನೆ ಎಂದು ಹೇಳಿದ್ದಾರೆ,

ಪ್ರಧಾನಿ ಮೋದಿಗಾಗಿ ಮಗನ ಜೊತೆ ದೇವಾಲಯಗಳನ್ನ ಸುತ್ತುತ್ತಿರೋ ಶಿವಮ್ಮ ಮಲೆಮಹದೇಶ್ವರಕ್ಕೆ ಭೇಟಿ ನೀಡಿ, ರಂಭಾಪುರಿ ಮಠಕ್ಕೂ ಭೇಟಿ ನೀಡಿದ್ದಾರೆ.

Advertisement

ಇದನ್ನೂ ಓದಿ: Tragedy: SSLC ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next