Advertisement

ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರವಾಗಿ 10,000 ರೂ.

11:49 PM Aug 14, 2019 | Team Udayavani |

ಬೆಂಗಳೂರು: ಪ್ರವಾಹದಿಂದ ಸಂತ್ರಸ್ತರಾದ ಕುಟುಂಬ ಗಳಿಗೆ ತಕ್ಷಣ ಒಂದು ಬಾರಿಯ ಪರಿಹಾರವಾಗಿ 10,000 ರೂ.ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಎನ್‌ಡಿಆರ್‌ಎಫ್ನಡಿ ಸಂತ್ರಸ್ತರ ತಲಾ ಕುಟುಂಬಕ್ಕೆ 3,800 ರೂ.ಪರಿಹಾರ ಸಿಗಲಿದ್ದು, ರಾಜ್ಯ ಸರ್ಕಾರದಿಂದ 6,200 ರೂ. ಸೇರಿಸಿ ಒಟ್ಟು 10,000 ರೂ.ನೀಡಲು ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಬುಧವಾರ ತೀರ್ಮಾನಿಸಿದೆ.

Advertisement

ಸುಮಾರು 4 ಲಕ್ಷ ಮಂದಿ ಪರಿಹಾರ ಕೇಂದ್ರದಲ್ಲಿ ನೆಲೆ ಸಿದ್ದು, ಸುಮಾರು 1.50 ಲಕ್ಷ ಕುಟುಂಬಗಳಿರುವ ಅಂದಾ ಜು ಇದೆ. ಇಷ್ಟು ಕುಟುಂಬಗಳಿಗೆ ಒಂದು ಬಾರಿಗೆ 10, 000 ರೂ.ನೆರವು ನೀಡಲು ತೀರ್ಮಾನಿಸಿದ್ದು, ಸುಮಾರು 100 ಕೋಟಿ ರೂ.ವೆಚ್ಚವಾಗುವ ಸಾಧ್ಯತೆ ಇದೆ.ಸಂಪೂರ್ಣ ಮನೆ ಕಳೆದುಕೊಂಡು ಸೂರಿಲ್ಲದ ಸ್ಥಿತಿಗೆ ತಲುಪಿರುವ ಕುಟುಂಬಗಳು ತಾತ್ಕಾಲಿಕವಾಗಿ ಆಶ್ರಯ ಪಡೆಯಲು ಅನುಕೂಲವಾಗುವಂತೆ 10 ತಿಂಗಳ ಕಾಲ ಮಾಸಿಕ 5000 ರೂ.ನೆರವು ನೀಡಲು ಸಂಪುಟ ಅನು ಮೋದನೆ ನೀಡಿದೆ. ಸುಮಾರು 5000 ಕುಟುಂಬಗಳು ಸಂಪೂರ್ಣ ಮನೆ ಕಳೆದುಕೊಂಡಿರುವ ಮಾಹಿತಿಯಿದ್ದು, ಈ ಕುಟುಂಬಗಳಿಗೆ 10 ತಿಂಗಳ ಕಾಲ ಮಾಸಿಕ 5000 ರೂ. ನೆರವು ಸಿಗಲಿದೆ.

ಶಿವಮೊಗ್ಗಕ್ಕೆ ಹಲವು ಯೋಜನೆ: ಶಿವಮೊಗ್ಗ- ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗವನ್ನು 956 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದು ಸೇರಿದಂತೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟ ಕೆಲ ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಶಿವಮೊಗ್ಗ ದಲ್ಲಿ ಕಿರು ವಿಮಾನ ಇಳಿದಾಣವನ್ನು (ರನ್‌ವೇ)ಕೆಎಸ್‌ಐಐಡಿಸಿ ಸಂಸ್ಥೆ ಮೂಲಕ 38 ಕೋಟಿ ರೂ.ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಸೊರಬ ತಾಲೂಕಿನಲ್ಲಿ ಸಣ್ಣ ನೀರಾವರಿ ಹಾಗೂ ಜಿ. ಪಂ. ವ್ಯಾಪ್ತಿಗೆ ಒಳಪಟ್ಟ 66 ಕೆರೆಗಳನ್ನು ಮೂಡಿ ಗ್ರಾಮದ ಬಳಿಯ ವರದಾ ನದಿಯಿಂದ ನೀರೆತ್ತಿ ತುಂಬಿಸುವ 285 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಂಪುಟ ಆಡಳಿತಾ ತ್ಮಕ ಅನುಮೋದನೆ ನೀಡಿದೆ. ಹಳೆ ಕಾರಾಗೃಹ ವಿದ್ದ 46 ಎಕರೆ ಜಾಗವನ್ನು ಪೊಲೀಸ್‌ ಇಲಾಖೆಯಿಂದ ಜಿಲ್ಲಾಡಳಿ ತಕ್ಕೆ ಹಸ್ತಾಂತರಿಸಿ, ಆ ಜಾಗವನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಒಪ್ಪಿಗೆ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next