Advertisement

ಸುಪ್ರೀಂ ಕೋರ್ಟ್‌ನಲ್ಲಿ ದಶಕದಿಂದ 10,000 ಪ್ರಕರಣ ಪೆಂಡಿಂಗ್‌!

10:03 PM Aug 04, 2022 | Team Udayavani |

ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 71 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಈ ಪೈಕಿ 10 ಸಾವಿರ ಕೇಸುಗಳು ಬರೋಬ್ಬರಿ 10 ವರ್ಷಗಳಿಂದ ವಿಲೇವಾರಿಗೆ ಕಾಯುತ್ತಿವೆ! ಹೀಗೆಂದು ಸ್ವತಃ ಕೇಂದ್ರ ಸರ್ಕಾರವೇ ರಾಜ್ಯಸಭೆಗೆ ಮಾಹಿತಿ ನೀಡಿದೆ.

Advertisement

ಆ.2ರವರೆಗೆ 71,411 ಕೇಸುಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಇದರಲ್ಲಿ 56 ಸಾವಿರ ಸಿವಿಲ್‌, 15 ಸಾವಿರ ಕ್ರಿಮಿನಲ್‌ ಪ್ರಕರಣಗಳಾಗಿವೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

42 ಸಾವಿರ ಕೇಸುಗಳು 5 ವರ್ಷಗಳಿಂದಲೂ ವಿಲೇವಾರಿಗೆ ಕಾಯುತ್ತಿವೆ ಎಂದೂ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next