Advertisement

Byju’s ನಿಂದ 1,000 ಉದ್ಯೋಗಿಗಳ ವಜಾ?

10:58 PM Jun 09, 2023 | Team Udayavani |

ನವದೆಹಲಿ: ಸುಮಾರು 1,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಬೈಜೂಸ್‌ ನಿರ್ಧರಿಸಿದೆ ಎನ್ನಲಾಗಿದೆ. ಆರು ತಿಂಗಳ ಹಿಂದೆ 5,000 ಉದ್ಯೋಗಿಗಳನ್ನು ಶಿಕ್ಷಣ-ತಂತ್ರಜ್ಞಾನ ದೈತ್ಯ ಸಂಸ್ಥೆ ಬೈಜೂಸ್‌ ವಜಾಗೊಳಿಸಿತ್ತು. ದೇಶದಲ್ಲಿ ಒಟ್ಟು 280 ಟ್ಯೂಶನ್‌ ಸೆಂಟರ್‌ಗಳನ್ನು ಬೈಜೂಸ್‌ ಹೊಂದಿದೆ.

Advertisement

ಪ್ರತಿ ಕೇಂದ್ರದಿಂದ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ವಿಭಾಗದ ತಲಾ ಇಬ್ಬರನ್ನು ಕೆಲಸದಿಂದ ತೆಗೆದುಹಾಕುವಂತೆ ಮಾರ್ಕೆಟಿಂಗ್‌ ಮ್ಯಾನೇಜರ್‌ಗಳಿಗೆ ಕಂಪನಿ ಸೂಚಿಸಿದೆ. ಅಲ್ಲದೇ ಸುಮಾರು 150 ಮಾರ್ಕೆಟಿಂಗ್‌ ಮ್ಯಾನೇಜರ್‌ಗಳನ್ನು ಸಹ ವಜಾಗೊಳಿಸಲು ಬೈಜೂಸ್‌ ಮುಂದಾಗಿದೆ. ಇದೇ ವೇಳೆ ಕೆಲಸದಿಂದ ವಜಾಗೊಳ್ಳುವರಿಗೆ ಎರಡು ತಿಂಗಳ ಸಂಬಳ ನೀಡಲು ಕಂಪನಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next