Advertisement

ಬರಲಿದೆ 100 ರೂ. ನಾಣ್ಯ! –“ಮನ್‌ ಕೀ ಬಾತ್‌” 100ನೇ ಆವೃತ್ತಿಯಲ್ಲಿ ಅನಾವರಣ

10:34 PM Apr 23, 2023 | Team Udayavani |

ನವದೆಹಲಿ: ನಾವೆಲ್ಲರೂ 1, 2, 5, 10 ಮತ್ತು 20 ರೂ. ಕಾಯಿನ್‌ಗಳನ್ನು ಬಳಸಿದ್ದೇವೆ. ಶೀಘ್ರದಲ್ಲೇ ಭಾರತ ಸರ್ಕಾರ 100 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಲಿದೆ. ಆದರೆ ಇದು ನಿತ್ಯ ಬಳಕೆಗೆ ಸಿಗುವುದು ಅಪರೂಪ. ನಿರ್ದಿಷ್ಟ ಸಂಖ್ಯೆಯ ನಾಣ್ಯಗಳನ್ನು ಮಾತ್ರ ಆರ್‌ಬಿಐ ಟಂಕಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ “ಮನ್‌ ಕೀ ಬಾತ್‌’ ಬಾನುಲಿ ಕಾರ್ಯಕ್ರಮವು ಶೀಘ್ರದಲ್ಲೇ 100ನೇ ಆವೃತ್ತಿ ಪೂರೈಸುತ್ತಿದೆ. ಇದರ ಸ್ಮರಣಾರ್ಥ ಆರ್‌ಬಿಐ 100 ರೂ. ಮುಖಬೆಲೆಯ ನಾಣ್ಯವನ್ನು ಅನಾವರಣಗೊಳಿಸುತ್ತಿದೆ. ತಮ್ಮ 100ನೇ “ಮನ್‌ ಕೀ ಬಾತ್‌” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.

Advertisement

ಹೇಗಿರಲಿದೆ ನಾಣ್ಯ?
ನಾಣ್ಯದ ಒಂದು ಬದಿಯಲ್ಲಿ 100 ರೂ. ಮುಖಬೆಲೆಯ ಗುರುತು ಇರಲಿದೆ. ಇನ್ನೊಂದು ಬದಿಯಲ್ಲಿ “ಮನ್‌ ಕೀ ಬಾತ್‌’ 100ನೇ ಆವೃತ್ತಿಯ ಸಂಕೇತವಿದ್ದು, ಇದರಲ್ಲಿ ಧ್ವನಿ ತರಂಗಗಳಿರುವ ಮೈಕ್ರೊಫೋನ್‌ ಚಿತ್ರವಿರಲಿದೆ. ನಾಣ್ಯದ ಒಟ್ಟು ತೂಕ 35 ಗ್ರಾಂ ಇರಲಿದೆ ಎಂದು ಮೂಲಗಳು ತಿಳಿಸಿವೆ.

1 ಲಕ್ಷ ಸ್ಥಳಗಳಲ್ಲಿ ಪ್ರಸಾರ:
“ಮನ್‌ ಕೀ ಬಾತ್‌’ 100ನೇ ಆವೃತ್ತಿಯ ಬಾನುಲಿ ಕಾರ್ಯಕ್ರಮವು ಏ.30ರಂದು ಪ್ರಸಾರವಾಗಲಿದೆ. ಇದು ಆಯ್ದ 1 ಲಕ್ಷ ಸ್ಥಳಗಳಲ್ಲಿ ಪ್ರಸಾರ ಆಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next