Advertisement

ಮಾಸ್ಕ್ ಧರಿಸದವರಿಗೆ 100 ರೂಪಾಯಿ ದಂಡ!

03:54 PM Jul 06, 2020 | Suhan S |

ಅಥಣಿ: ಸಂಡೇ ಲಾಕ್‌ಡೌನ್‌ ಅಥಣಿಯಲ್ಲಿ ಯಶಸ್ವಿಗೊಂಡಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಶನಿವಾರ ಸಾಯಂಕಾಲವೇ ಬಂದ್‌ ಆಗಿದ್ದರಿಂದ ಜನರು ಮಾರುಕಟ್ಟೆಯತ್ತ ಬರಲಿಲ್ಲ. ಆದರೆ ಅವಶ್ಯಕ ಸಾಮಗ್ರಿಗಳ ಅಂಗಡಿಗಳು ಮಾತ್ರ ತೆರೆದಿದ್ದವು. ಅಲ್ಲಲ್ಲಿ ಗುಂಪು ಸೇರಿದ್ದ ಜನರನ್ನು ಪೊಲೀಸರು ಚದುರಿಸಿದ ಪ್ರಸಂಗ ಅಲ್ಲಲ್ಲಿ ಕಂಡು ಬಂದವು.

Advertisement

ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನ ವೈರಸ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಸಿಬ್ಬಂದಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಂಕು ತಡೆಗಟ್ಟುವ ರೋಗ ನಿರೋಧಕ ಔಷಧ ಸಿಂಪಡನೆ ಮಾಡಲಾಯಿತು.

ಮಾಸ್ಕ್ ಹಾಕಿಕೊಳ್ಳದವರಿಗೆ ದಂಡ: ಅಥಣಿಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನರಲ್ಲಿ ಭಯ ಹೆಚ್ಚಿದೆ. ಜತೆಗೆ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಿಕೊಳ್ಳದವರಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಹೊರಗಡೆ ಬರುವಾಗ ಮಾಸ್ಕ್ ಧರಿಸಿಕೊಂಡು ಬರುವುದು ಎಂದು ಸರ್ಕಾರ ನಿಯಮ ಮಾಡಿದರು ಯಾರು ಸ್ಪಂದನೆ ಮಾಡುತ್ತಿರಲಿಲ್ಲ. ಸ್ಥಳೀಯ ಶಾಸಕ ಮಹೇಶ್‌ ಕುಮಟಳ್ಳಿ ಅವರು ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿ, ಮಾಸ್ಕ್ ಇಲ್ಲದೆ ಹೊರಗೆ ಓಡಾಡುವವರಿಗೆ 100 ರೂಪಾಯಿ ದಂಡ ವಿಧಿಸಿ ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next