ಕನ್ನಡ ಚಿತ್ರರಂಗದ ಸು#ರದ್ರೂಪಿ ನಟ ಕಂ ನಿರ್ದೇಶಕ ರಮೇಶ್ ಅರವಿಂದ್ ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರತಿವರ್ಷ ತಮ್ಮ ಅಭಿಮಾನಿಗಳ ಜೊತೆ ಬರ್ತ್‌ಡೇ ಸಂಭ್ರಮಿಸುತ್ತಿದ್ದ ರಮೇಶ್ ಅರವಿಂದ್, ಈ ಬಾರಿ ಕೊರೊನಾ ಆತಂಕದಿಂದ ಮನೆಮಂದಿ ಜೊತೆಗಷ್ಟೇ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ರಮೇಶ್ ಅರವಿಂದ್, ತಮ್ಮ ಬರ್ತ್‌ಡೇ ಸೆಲೆಬ್ರೆಶನ್, ಮುಂಬರುವ “100′ ಚಿತ್ರ ಮೊದಲಾದವುಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. “ಪ್ರತಿವರ್ಷ ಬರ್ತ್‌ಡೇ ಅಂದ್ರೆ ಒಂದಷ್ಟು ಸೆಲೆಬ್ರೆಶನ್ ಇರುತ್ತಿತ್ತು. ಆದ್ರೆ ಈ ಬಾರಿ ಕೋವಿಡ್ ಭಯದಿಂದ ದೊಡ್ಡದಾಗಿ ಬರ್ತ್‌ಡೇ ಸೆಲೆಬ್ರೇಷನ್ ಅಂಥ ಏನೂ, ಮಾಡ್ತಿಲ್ಲ. ಈ ಬರ್ತ್‌ಡೇಯನ್ನ ಕಂಪ್ಲೀಟ್ ಫ್ಯಾಮಿಲಿ ಜೊತೆಗೆ ಆಚರಿಸಿಕೊಂಡಿದ್ದೇನೆ. ಕೋವಿಡ್ ಆತಂಕ ಸದ್ಯಕ್ಕೆ ನಮ್ಮೆಲ್ಲರನ್ನೂ ಒಟ್ಟಾಗಿ ಸೇರದಂತೆ ಮಾಡಿದೆ. ಆದಷ್ಟು ಬೇಗ ಈ ಭಯ-ಆತಂಕ ದೂರವಾಗಲಿ ಅಂಥ ಕೇಳಿಕೊಳ್ಳುತ್ತೇನೆ’ – ಹೀಗೆ ಹೇಳುತ್ತ ಮಾತಿಗಿಳಿದರು ನಟ ರಮೇಶ್ ಅರವಿಂದ್.
ಹೌದು, ರಮೇಶ್ ಅರವಿಂದ್ ಮೊದಲಿನಿಂದಲೂ ತಮ್ಮ ಅಭಿಮಾನಿಗಳು, ಸ್ನೇಹಿತರು ಮತ್ತು ಫ್ಯಾಮಿಲಿ ಜೊತೆಗೆ ಸೇರಿ ಬರ್ತ್ ಡೇ ಆಚರಿಸಿಕೊಳ್ಳುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಆದರೆ ಈ ಬಾರಿ ಅವರೇ ಹೇಳುವಂತೆ, ಕೋವಿಡ್ ಅದೆಲ್ಲದಕ್ಕೂ ಬ್ರೇಕ್ ಹಾಕಿದೆ. ಹಾಗಾಗಿ ಸಾಂಕೇತಿಕವಾಗಿ ತಮ್ಮ ಫ್ಯಾಮಿಲಿ ಜೊತೆಗೆ ಈ ಬಾರಿ ಜನ್ಮದಿನವನ್ನು ಕಳೆದಿದ್ದಾರಂತೆ ರಮೇಶ್ ಅರವಿಂದ್.
ಸದ್ಯ ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸುತ್ತಿರುವ “100′ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ. “100′ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು/ಎ’ ಸರ್ಟಿಫಿಕೇಟ್ ಕೊಟ್ಟು ಬಿಡುಗಡೆಗೆ ಅಸ್ತು ಎಂದಿದೆ. ಈಗಾಗಲೇ “100′ ಚಿತ್ರದ ಪ್ರಮೋಶನ್ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ರಮೇಶ್ ಅರವಿಂದ್ ಅವರ ಬರ್ತ್‌ಡೇ ಪ್ರಯುಕ್ತ, ಬರ್ತ್‌ಡೇ ಬಗ್ಗೆಯೇ ಇರುವ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ.
ಇದೇ ವೇಳೆ “100′ ಚಿತ್ರದ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್, “ನಮ್ಮ ಪ್ಲಾನ್ ಪ್ರಕಾರ, ಇಷ್ಟೊತ್ತಿಗಾಗಲೇ “100′ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಕೊರೊನಾ ಲಾಕ್‌ಡೌನ್ ನಿಂದಾಗಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡಿಕೊಳ್ಳಬೇಕಾಯ್ತು. ಇದೊಂದು ಫ್ಯಾಮಿಲಿ ಕ್ರೈಂ-ಥ್ರಿಲ್ಲರ್ ಸಬೆjಕ್ಟ್ ಸಿನಿಮಾ. ಸೋಶಿಯಲ್ ಮೀಡಿಯಾ ಅನ್ನೋದು ಒಂದು ವರ. ಅದನ್ನು ಶಾಪದ ಥರ ಮಾಡಿಕೊಳ್ಳಬೇಡಿ ಅನ್ನೋದು ಸಿನಿಮಾದ ಮೆಸೇಜ್. ಈ ಸಿನಿಮಾದಲ್ಲಿ ನನ್ನದು ವಿಷ್ಣು ಎನ್ನುವ ಪೊಲೀಸ್ ಆμàಸರ್ ಪಾತ್ರ. ಇಲ್ಲಿಯವರೆಗೆ ನಾನು ನೂರಕ್ಕೂ ಹೆಚ್ಚು ಚಿತ್ರ ಮಾಡಿದ್ದೇನೆ. ಆದರೆ, ಯಾವುದೇ ಸಿನಿಮಾದಲ್ಲೂ ಒಬ್ಬ ಖಡಕ್ ವಿಲನ್ ಎದುರು ನಿಂತು ನಾನು ಫೈಟ್ ಮಾಡಿಲ್ಲ. ಏಕೆಂದರೆ ನನ್ನ ಸಿನಿಮಾಗಳಲ್ಲಿ ಸನ್ನಿವೇಶ, ಸಂದರ್ಭಗಳೇ ವಿಲನ್ ಆಗಿರುತ್ತಿದ್ದವು. ಆದರೆ, “100′ ಸಿನಿಮಾ ಅದಕ್ಕೆ ವಿರುದ್ಧ. ಇಲ್ಲೊಬ್ಬ ವಿಲನ್ ಇದ್ದಾನೆ. ಅವನ ಜೊತೆ ನಾನು ದೈಹಿಕವಾಗಿ ಹೊಡೆದಾಡಿದ್ದೇನೆ. ಫೈಟ್ ಮಾಸ್ಟರ್ ಇಟ್ಟು ಸಾಹಸ ಸಂಯೋಜಿಸಲಾಗಿದೆ’ ಎನ್ನುತ್ತಾರೆ. ಇನ್ನು “ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “100′ ಚಿತ್ರಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ.
-ಜಿ.ಎಸ್.ಕಾರ್ತಿಕ ಸುಧನ್