Advertisement

ಬಿಜೆಪಿ ನಾಯಕನ ಕಾರಿನ ಮೇಲೆ ದಾಳಿ; ನೂರು ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

06:39 PM Jul 15, 2021 | Team Udayavani |

ನವದೆಹಲಿ:ರಾಜ್ಯದ ಆಡಳಿತಾರೂಢ ಬಿಜೆಪಿ ಮತ್ತು ಜನನಾಯಕ್ ಜನತಾ ಪಕ್ಷ ಮೈತ್ರಿ ಸರ್ಕಾರ, ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಬಿಜೆಪಿ ಮುಖಂಡ, ಡೆಪ್ಯುಟಿ ಸ್ಪೀಕರ್ ರಣಬೀರ್ ಗಂಗ್ವಾ ಅವರ ವಾಹನದ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಆರೋಪದಡಿ ಹರ್ಯಾಣ ಪೊಲೀಸರು ನೂರಕ್ಕೂ ಅಧಿಕ ರೈತರ ವಿರುದ್ಧ ದೇಶದದ್ರೋಹದ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು BCIC-SDM ನೋಡಲ್‌ ಸೆಂಟರ್‌ ಗಳು ಸಹಕಾರಿ: ಶೆಟ್ಟರ್‌

ಈ ಘಟನೆ ಹರ್ಯಾಣದ ಸಿರ್ಸಾ ಜಿಲ್ಲೆಯಲ್ಲಿ ಜುಲೈ 11ರಂದು ನಡೆದಿದ್ದು, ಅದೇ ದಿನ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು ಎಂದು ವರದಿ ಹೇಳಿದೆ. ದೇಶದ್ರೋಹ ಆರೋಪದ ಹೊರತಾಗಿಯೂ ರೈತರ ವಿರುದ್ಧ ಕೊಲೆಯತ್ನದ ಆರೋಪವನ್ನು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.

ಎಫ್ ಐಆರ್ ನಲ್ಲಿ ರೈತ ಚಳವಳಿಯ ಮುಖಂಡರಾದ ಹರ್ ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಸೇರಿದಂತೆ ಇಬ್ಬರ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಈ ಆರೋಪವನ್ನು ಅಲ್ಲಗಳೆದಿದೆ. ಇದೊಂದು ಸುಳ್ಳು ಮತ್ತು ಪೂರ್ವಯೋಜಿತವಾಗಿದ್ದು, ಆರೋಪವನ್ನು ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next