Advertisement

ಭರ್ಜರಿ 100 ಡೇಸ್‌

10:51 AM Dec 25, 2017 | |

ಈ ವರ್ಷ ಶತದಿನೋತ್ಸವ ಆಚರಿಸಿಕೊಂಡ ಚಿತ್ರಗಳ ಸಂಖ್ಯೆ ಬಹಳ ಕಡಿಮೆಯೇ. ಕೆಲವು ತಿಂಗಳ ಹಿಂದೆ ಪುನೀತ್‌ ರಾಜಕುಮಾರ್‌ ಅಭಿನಯದ “ರಾಜಕುಮಾರ’ ಚಿತ್ರವು ಯಶಸ್ವಿಯಾಗಿ ನೂರು ದಿನ ಮುಗಿಸಿ, ಶತದಿನೋತ್ಸವ ಕಾರ್ಯಕ್ರಮ ಸಹ ನಡೆದಿತ್ತು.

Advertisement

ಈಗ ಈ ವರ್ಷದ ಇನ್ನೊಂದು ಚಿತ್ರವಾದ “ಭರ್ಜರಿ’ ಸಹ ಶುಕ್ರವಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡವು ಭಾನುವಾರ ನರ್ತಕಿ ಚಿತ್ರಮಂದಿರದ ಎದುರು ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿತು.

ಕಾರ್ಯಕ್ರಮವನ್ನು ಕಲರ್‌ಫ‌ುಲ್‌ಗೊಳಿಸಬೇಕೆಂಬ ಉದ್ದೇಶದಿಂದ ಡೊಳ್ಳು ಕುಣಿತ, ವೀರಗಾಸೆ, ಮೈಸೂರು ನಗಾರಿ, ಪೂಜಾ ಕುಣಿತ, ಕೇರಳ ಚೆಂಡೆ, ಕೀಲುಗೊಂವೆ, ತಮಟೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಧ್ರುವ ಸರ್ಜಾ ಅವರ 75 ಅಡಿ ಕಟೌಟ್‌ಗೆ ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿತ್ತು. ಚಿತ್ರ ಶತದಿನ ಆಚರಿಸಿದ ಸಂಭ್ರಮವನ್ನು ಚಿತ್ರತಂಡ 101 ಕೆಜಿಯ ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡದ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next