Advertisement

ಶತಕೋಟಿ ಡೋಸ್‌ ದಾಖಲೆ

11:25 PM Oct 21, 2021 | Team Udayavani |

ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಭಾರತ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದೆ. ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ ಸರಿಯಾಗಿ 100 ಕೋಟಿ ಮಂದಿಗೆ ಕೊರೊನಾ ಲಸಿಕೆ ಡೋಸ್‌ ನೀಡಲಾಗಿದೆ. ಅಂದರೆ ಜ.16ರಂದು ಲಸಿಕಾ ಪ್ರಕ್ರಿಯೆ ಆರಂಭವಾಗಿದ್ದು, 275 ದಿನಗ ಳಲ್ಲಿ ಶತಕ ಕೋಟಿ ಬಾರಿಸಿದೆ. ಹೆಚ್ಚು ಲಸಿಕೆ ಕೊಟ್ಟ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಪುದುಚೇರಿ ಕಡೆಯ ಸ್ಥಾನದಲ್ಲಿದೆ. ಇದು ಎರಡೂ ಡೋಸ್‌ಗಳನ್ನು ಸೇರಿಸಿ ಹಾಕಿರುವ ಲೆಕ್ಕಾಚಾರ.

Advertisement

ಪ್ರಕ್ರಿಯೆ ನಡೆದುಬಂದ ದಾರಿ… :

ಭಾರತದಲ್ಲಿ ಲಸಿಕಾ ಪ್ರಕ್ರಿಯೆ ಆರಂಭ ಅಷ್ಟೇನೂ ಸಮಾಧಾನಕರವಾಗಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿ ಲಸಿಕೆ ಕುರಿತಾಗಿ ಇದ್ದ ನಿರ್ಲಕ್ಷ್ಯ. ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿದ ಹೊತ್ತಲ್ಲಿ ದೇಶದಲ್ಲಿ ಕೊರೊನಾ ಮೊದಲನೇ ಅಲೆ ಬಂದು ಹೋಗಿಯಾಗಿತ್ತು. ಇನ್ನೂ ಎರಡನೇ ಅಲೆ ಆರಂಭವಾಗಿರಲಿಲ್ಲ. ಕೊರೊನಾ ಸಂಪೂರ್ಣವಾಗಿ ಹೋಗಿದೆಯೇನೋ ಎಂದು ಭಾವಿಸಿದ್ದ ಜನ, ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆ ಸಮಯದಲ್ಲಿ ಕೇಂದ್ರ ಸರಕಾರ, ಉತ್ಪಾದಿಸಿದ್ದ ಲಸಿಕೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿತ್ತು. ಆದರೆ ಮಾರ್ಚ್‌ ಅನಂತರದಲ್ಲಿ 2ನೇ ಅಲೆ ಆರಂಭವಾದ ತತ್‌ಕ್ಷಣ ಲಸಿಕೆಗೆ ದಿಢೀರ್‌ ಬೇಡಿಕೆ ಬಂದಿತು. ಆಗ ಜನರಿಗೆ ಲಸಿಕೆ ಕೊಡಲು ದಾಸ್ತಾನು ಇರಲಿಲ್ಲ. ಈ ಸಂದರ್ಭದಲ್ಲಿ ಒಂದಷ್ಟು ಪ್ರಮಾಣದಲ್ಲಿ ಗೊಂದಲವೂ ಆಯಿತು. 2ನೇ ಅಲೆ ಮುಗಿಯುವ ಹೊತ್ತಿಗೆ, ಲಸಿಕೆ ದಾಸ್ತಾನು ಕೂಡ ಸಾಕಷ್ಟು ಲಭ್ಯವಾಯಿತು. ಇತ್ತೀಚೆಗಷ್ಟೇ ಒಂದೇ ದಿನ 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿ ದಾಖಲೆ ನಿರ್ಮಿಸಲಾಗಿದೆ.

ಯಾವ್ಯಾವ ಲಸಿಕೆ? :

ಸದ್ಯ ದೇಶದಲ್ಲಿ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್‌ ಕೂಡ ಸಿಗುತ್ತಿದೆ. ಆದರೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳನ್ನೇ.

Advertisement

ಕರ್ನಾಟಕದಲ್ಲಿ 6.21 ಕೋಟಿ:

ಸೆಪ್ಟಂಬರ್‌ನಿಂದ ನಡೆದ ಸಾಲು ಸಾಲು ಲಸಿಕೆ ಮೇಳಗಳಿಂದ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ಸಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ಬರೋಬ್ಬರಿ 6.21 ಕೋಟಿ ಡೋಸ್‌ನಷ್ಟು ಲಸಿಕೆ ಹಂಚಿಕೆ ಮಾಡಲಾಗಿದೆ.

ಮೇಳದಲ್ಲಿ 1 ಕೋಟಿ  :

ಆರೋಗ್ಯ ಇಲಾಖೆಯು ಪ್ರತೀ ಬುಧವಾರ ಹಮ್ಮಿಕೊಳ್ಳಲು ನಿರ್ಧರಿಸಿತು. ಸೆಪ್ಟಂಬರ್‌ನಲ್ಲಿ ಪ್ರಧಾನಿ ಮೋದಿ ಹುಟ್ಟು ಹಬ್ಬ ಸೇರಿ ರಾಜ್ಯದಲ್ಲಿ ಐದು ದಿನ ಲಸಿಕೆ ಮೇಳ ನಡೆಯಿತು. ಈ ಮೇಳಗಳಲ್ಲಿಯೇ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆೆ.

ಜಿಲ್ಲೆ    ಡೋಸ್‌

ಬೆಂಗಳೂರು:

(ಬಿಬಿಎಂಪಿ ಸೇರಿ)          1.46 ಕೋಟಿ

ಬೆಳಗಾವಿ            43.5 ಲಕ್ಷ

ಮೈಸೂರು          31.3 ಲಕ್ಷ

ಬಳ್ಳಾರಿ 24.3 ಲಕ್ಷ

ತುಮಕೂರು       24 ಲಕ್ಷ

ರಾಜ್ಯ ಲಸಿಕೆ ಹಾದಿ

ತಿಂಗಳು                 ಡೋಸ್‌

ಜನವರಿ               3.3 ಲಕ್ಷ

ಫೆಬ್ರವರಿ             6.2 ಲಕ್ಷ

ಮಾರ್ಚ್‌             38 ಲಕ್ಷ

ಎಪ್ರಿಲ್‌                58 ಲಕ್ಷ

ಮೇ        37.8

ಜೂನ್‌ 88 ಲಕ್ಷ

ಜುಲೈ    75 ಲಕ್ಷ

ಆಗಸ್ಟ್‌ 1.2 ಕೋಟಿ

ಸೆಪ್ಟಂಬರ್‌         1.4 ಕೋಟಿ

ಅಕ್ಟೋಬರ್‌ (21ರ ವರೆಗೂ)         54 ಲಕ್ಷ

(ನಿತ್ಯ- 2.24 ಲಕ್ಷ ಡೋಸ್‌ ವಿತರಣೆ)

ಅತೀ ಕಡಿಮೆ ಡೋಸ್‌ ಕೊಟ್ಟ ರಾಜ್ಯಗಳು :

ಪುದುಚೇರಿ

11,00,117

ನಾಗಾಲ್ಯಾಂಡ್‌

11,59,233

ಮಿಜೋರಾಂ

12,01,995

ಅರುಣಾಚಲ ಪ್ರದೇಶ

12,67,639

ಚಂಡೀಗಢ

14,37,739

ಮೇಘಾಲಯ

16,72,601

ಅತೀ ಹೆಚ್ಚು ಡೋಸ್‌ ಕೊಟ್ಟ ರಾಜ್ಯಗಳು :

ಉತ್ತರ ಪ್ರದೇಶ

12,23,62,158

ಮಹಾರಾಷ್ಟ್ರ

9,36,10,561

ಪಶ್ಚಿಮ ಬಂಗಾಲ

6,86,93,594

ಗುಜರಾತ್‌

6,77,81,319

ಮಧ್ಯ ಪ್ರದೇಶ

6,74,83,387

ಬಿಹಾರ

6,36,08,814

ಕರ್ನಾಟಕ

6,21,45,106

ರಾಜಸ್ಥಾನ

6,10,52,275

18ರಿಂದ 44- ಉತ್ತಮ ಸ್ಪಂದನೆ:

18-44

55,64,75, 276

45-60

27,01,85,858

60+

17,07,25,633

 

88,20,86,260

ಕೊವಿಶೀಲ್ಡ್‌

11,42,50,936

ಕೊವ್ಯಾಕ್ಸಿನ್‌

ಸಾಗಬೇಕಾದ ದಾರಿ ಇನ್ನೂ ಇದೆ… :

ಎರಡೂ ಡೋಸ್‌ಗಳ ಲೆಕ್ಕಾಚಾರದಲ್ಲಿ ನಾವಿಂದು 100 ಕೋಟಿಯ ಗಡಿ ದಾಟಿದ್ದೇವೆ. ಆದರೆ, ಈ ನೂರು ಕೋಟಿಯಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆಯೇ ಶೇ.70ರಷ್ಟಿದೆ. ಆದರೆ, ಮೊದಲನೇ ಮತ್ತು ಎರಡನೇ ಡೋಸ್‌ ಪಡೆದವರ ಸಂಖ್ಯೆ ಶೇ.30ರಷ್ಟಿದೆ.  ಶೇ.70ರಷ್ಟು ಮಂದಿಗೆ ಇನ್ನೂ ಒಂದು ಡೋಸ್‌ ನೀಡಬೇಕು. ಕೇಂದ್ರ ಸರಕಾರ ಈ ವರ್ಷಾಂತ್ಯದೊಳಗೆ ಈ ಗುರಿ ಮುಟ್ಟಲಿದ್ದೇವೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next