Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರು ವಾರ ಮಳೆಹಾನಿ ಮತ್ತು ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು ಅಧಿಕಾರಿಗಳಿಂದ ಮಳೆ ಹಾನಿಯ ಸಮಗ್ರ ಮಾಹಿತಿ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗನ್ನು ಸರಕಾರ ಎಂದಿಗೂ ಅವಗಣಿಸಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು. ಗಾಳಿಮಳೆಯಿಂದ ಮನೆ ಕಳೆದುಕೊಂಡವರಿಗೆ ಇಲ್ಲಿಯವರೆಗೆ ಕೇವಲ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಇನ್ನು ಮುಂದೆ ಮನೆ ಸಂಪೂರ್ಣವಾಗಿ ನಾಶವಾದರೆ 95 ಸಾವಿರ ರೂ. ಪರಿಹಾರಧನ ಮತ್ತು ಆಶ್ರಯ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಅಗತ್ಯವಿರುವವರಿಗೆ ಉಚಿತ ಬಿತ್ತನೆ ಬೀಜ ವಿತರಿಸಲಾಗುವುದು. ಹಾನಿಗೊಳಗಾಗಿರುವ ರಸ್ತೆ, ವಿದ್ಯುತ್ ಕಂಬಗಳನ್ನು ಕೂಡಲೇ ಸರಿ ಮಾಡಲಾಗುವುದು ಎಂದು ಹೇಳಿದರು.