ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ “ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಬಿಡುಗಡೆಯಾಗಿ ಇದೇ ಮಾ. 8ಕ್ಕೆ ಹತ್ತು ವರ್ಷವಾಯಿತು.
ನಟ ರಕ್ಷಿತ್ ಶೆಟ್ಟಿ ಅವರನ್ನು ಸಿಂಪಲ್ ಸ್ಟಾರ್ ಆಗಿ, ನಿರ್ದೇಶಕ ಸುನಿ ಅವರನ್ನು ಸಿಂಪಲ್ ಸುನಿ ಎಂದೇ ಚಿತ್ರರಂಗಕ್ಕೆ ಪರಿಚಯಿಸಿದ “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದ ದಶಕದ ಸಂಭ್ರಮವನ್ನು ಇತ್ತೀಚೆಗೆ ಆಚರಿಸಲಾಯಿತು.
ಸದ್ಯ ಸುನಿ ನಿರ್ದೇಶಿಸುತ್ತಿರುವ “ಒಂದು ಸರಳ ಪ್ರೇಮಕಥೆ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ನಿರ್ದೇಶಕ ಸುನಿ ಮತ್ತು ಚಿತ್ರತಂಡ ಸಿನಿಮಾದ ದಶಕದ ಖುಷಿಯನ್ನು ಸಂಭ್ರಮಿಸಿತು.
ಈ ಸಂದರ್ಭದಲ್ಲಿ ನಟ ವಿನಯ್ ರಾಜಕುಮಾರ್, ನಾಯಕಿಯರಾದ ಸ್ವಾತಿಷ್ಠಾಕೃಷ್ಣನ್, ಮಲ್ಲಿಕಾ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.