Advertisement

Bihar: ಬ್ಯಾಂಕ್‌ ನಿಂದ 1 ಲಕ್ಷ ರೂ.ದೋಚಿ ಓಡಿಹೋದ 10 ವರ್ಷದ ಬಾಲಕ!

10:27 PM Jul 24, 2023 | Team Udayavani |

ಬಕ್ಸಾರ್: ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಸೋಮವಾರ 10 ವರ್ಷದ ಬಾಲಕನೊಬ್ಬ ಬ್ಯಾಂಕ್‌ನ ಕೌಂಟರ್‌ನಿಂದ 1 ಲಕ್ಷ ರೂಪಾಯಿ ನಗದು ದೋಚಿ ಓಡಿಹೋದ ಘಟನೆ ನಡೆದಿದೆ.

Advertisement

ಸಿಬ್ಬಂದಿಯ ಮೇಲೆ ತೀವ್ರ ನಿಗಾ ಇರಿಸಿದ್ದ ಮಹಿಳೆಯೊಂದಿಗೆ ಬಾಲಕ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಂಕ್‌ಗೆ ಬಂದಿದ್ದಾನೆ ಎಂದು ಅವರು ಹೇಳಿದರು.

“ಕ್ಯಾಷಿಯರ್ ಮಧ್ಯಾಹ್ನ 12.45 ರ ಸುಮಾರಿಗೆ ತನ್ನ ಆಸನವನ್ನು ತೊರೆದು ಸಹೋದ್ಯೋಗಿಯೊಂದಿಗೆ ಮಾತನಾಡಲು ಹೋದಾಗ, ಹುಡುಗ ಕೌಂಟರ್‌ನಿಂದ 1 ಲಕ್ಷ ರೂಪಾಯಿ ಹಣವನ್ನು ಕಸಿದುಕೊಂಡು ಓಡಿಹೋದನು” ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮುಖ್ಯ ಶಾಖಾ ವ್ಯವಸ್ಥಾಪಕ ಅನುಪ್ ಕುಮಾರ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತನಿಖೆ ಆರಂಭಿಸಲಾಗಿದ್ದು, ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಳವಡಿಸಲಾಗಿರುವ ಎಲ್ಲಾ ಸಿಸಿಟಿವಿಗಳ ದೃಶ್ಯಾವಳಿಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಶಾಖೆಯ ಮಹಿಳಾ ಖಾತೆದಾರರ ಬಗ್ಗೆಯೂ ನಾವು ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಕುಮಾರ್ ಮಾಲಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next