Advertisement

ಬ್ಯಾಂಕ್‌ಗಳಿಗೆ 10 ರೂ. ನಾಣ್ಯ “ಹೊರೆ’!

01:24 PM Nov 22, 2021 | Team Udayavani |

ಮಹಾನಗರ: ಹತ್ತು ರೂ. ಮುಖಬೆಲೆಯ ನಾಣ್ಯಗಳ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೆಲವರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಕೆಲವು ಬ್ಯಾಂಕ್‌ಗಳಲ್ಲಿ ನಾಣ್ಯಗಳ ರಾಶಿ ಬಿದ್ದಿದೆ.

Advertisement

“10 ರೂ. ನಾಣ್ಯ ಚಲಾವಣೆಗೆ ಯಾವುದೇ ಹಿಂಜರಿಕೆ ಬೇಡ’ ಎಂದು ಈಗಾಗಲೇ ಆರ್‌ಬಿಐ, ಎಲ್ಲ ಬ್ಯಾಂಕ್‌ಗಳು, ಜಿಲ್ಲಾಡಳಿತಗಳು ಸ್ಪಷ್ಟವಾಗಿ ತಿಳಿಸಿವೆ. ಆದರೂ ಕೆಲವರು ತಮ್ಮಲ್ಲಿರುವ ನಾಣ್ಯಗಳನ್ನು ಮರಳಿಸುತ್ತಿರುವುದರಿಂದ ಬ್ಯಾಂಕ್‌ಗಳಿಗೆ ಹೊರೆಯಾಗಿ ಪರಿಣಮಿ ಸಿದೆ. ಇದರಿಂದ ನೋಟಿನ ಬದಲು ನಾಣ್ಯಗಳ ಚಲಾವಣೆಗೆ ಹೆಚ್ಚು ಆದ್ಯತೆ ನೀಡಲು ಮುಂದಾಗಿರುವ ಸರಕಾರದ ಉದ್ದೇಶ ಈಡೇರಿಕೆಗೆ ತೊಡಕಾಗಿದೆ.

ಇನ್ನೊಬ್ಬರತ್ತ ಬೆರಳು!:

10 ರೂ. ನಾಣ್ಯ ನಿರಾಕರಿಸುವವರು ಸ್ಪಷ್ಟ ಕಾರಣ ನೀಡುತ್ತಿಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಹೊರಿಸುತ್ತಾರೆ. ಕೆಲವು ಖಾಸಗಿ ಬಸ್‌ಗಳ ನಿರ್ವಾಹಕರೂ ನಾಣ್ಯವನ್ನು ನಿರಾಕರಿಸುತ್ತಾರೆ. ಪ್ರಶ್ನಿಸಿದರೆ “ನಾವು ಯಾರಿಗೆ ಕೊಡುವುದು? ಅಂಗಡಿಯವರೂ ಸ್ವೀಕರಿಸುತ್ತಿಲ್ಲ’ ಎನ್ನುತ್ತಾರೆ. ಅಂಗಡಿಯವರಲ್ಲಿ ಪ್ರಶ್ನಿಸಿದಾಗ “ನಾವು ಸ್ವೀಕರಿಸುತ್ತೇವೆ. ಆದರೆ ಗ್ರಾಹಕರು ಸ್ವೀಕರಿಸುವುದಿಲ್ಲ’ ಎಂದುತ್ತರಿಸುತ್ತಾರೆ. ಹೊಟೇಲ್‌, ಹಾಲಿನ ಬೂತ್‌ಗಳಲ್ಲಿಯೂ ಈ ಸಮಸ್ಯೆ ಎದುರಾಗಿದೆ.

ಮನವೊಲಿಕೆ :

Advertisement

ವಾಪಸಾಗುತ್ತಿರುವ ನಾಣ್ಯಗಳನ್ನು ಮತ್ತೆ ಚಲಾವಣೆಗೆ ಬರುವಂತೆ ಮಾಡು ವುದು ಬ್ಯಾಂಕ್‌ ಅಧಿಕಾರಿಗಳಿಗೆ ಸವಾಲಾ ಗಿದ್ದು, ವ್ಯಾಪಾರಸ್ಥರು, ಗ್ರಾಹಕರ ಮನವೊಲಿ ಸುತ್ತಿದ್ದಾರೆ. ಮುಂದೆ ಬ್ಯಾಂಕ್‌ಗಳ ಶಾಖಾ ಮಟ್ಟದಲ್ಲಿ “ನಾಣ್ಯ ಮೇಳ’ ನಡೆಸಿ ಜನರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಿ ಹೆಚ್ಚು ಹೆಚ್ಚು ಚಲಾವಣೆಗೆ ಬರುವಂತೆ ಮಾಡಲು ನಿರ್ಧರಿಸಿದ್ದಾರೆ.

20 ರೂ.ಗೆ ತೊಡಕಿಲ್ಲ:

ಈಗ ಚಲಾವಣೆಗೆ ಬಂದಿರುವ 20 ರೂ. ನಾಣ್ಯಗಳನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ 10 ರೂ. ಬಗ್ಗೆ ಯಾಕೋ ಕೆಲವರಲ್ಲಿ ಸಂದೇಹ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಬ್ಯಾಂಕ್‌ಗೆ ವಾಪಸಾಗುತ್ತಿರುವ 10 ರೂ. ನಾಣ್ಯಗಳ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ತಿಳಿವಳಿಕೆಯುಳ್ಳ ಜನರು ಇತರರಿಗೆ ಮಾಹಿತಿ ನೀಡಿ ಗೊಂದಲ ಸರಿಪಡಿಸುವ ಆವಶ್ಯಕತೆ ಇದೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

ನಿರಾಕರಣೆ ಸಲ್ಲದು:

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ 10 ರೂ. ನಾಣ್ಯಗಳನ್ನು ನಿರಾಕರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ನಿರ್ವಾಹಕರಿಗೆ 10 ರೂ. ನಾಣ್ಯ ಸ್ವೀಕರಿಸಬಾರದು ಎಂದು ನಾವು ಸೂಚನೆ ನೀಡಿಲ್ಲ ಎಂದು ಬಸ್‌ ಮಾಲಕರು ಸ್ಪಷ್ಟಪಡಿಸಿದ್ದಾರೆ. ಹೊಟೇಲ್‌ಗ‌ಳಲ್ಲೂ ನಿರಾಕರಿಸಬಾರದು ಎಂದು ಮಾಲಕರಿಗೆ ಸೂಚಿಸಲಾಗಿದೆ ಎಂದು ಸಂಘದವರು ತಿಳಿಸಿದ್ದಾರೆ.

10 ರೂ. ಮುಖಬೆಲೆಯ 10 ವಿನ್ಯಾಸದ ನಾಣ್ಯಗಳಿದ್ದು, ಎಲ್ಲವೂ ಇತರ ನಾಣ್ಯಗಳಂತೆಯೇ ಮಾನ್ಯತೆ ಹೊಂದಿವೆ. ರಿಸರ್ವ್‌ ಬ್ಯಾಂಕ್‌ ಕೂಡ ಸ್ಪಷ್ಟೀಕರಣ ನೀಡಿದೆ. ಜನರಿಗೆ ಯಾರೂ ತಪ್ಪು ಮಾಹಿತಿ ನೀಡಬಾರದು. ಹೆಚ್ಚು ಬಾಳಿಕೆಗಾಗಿ, ನೋಟಿನ ಕಾಗದಗಳಿಗೆ ಮರಗಳ ಬಳಕೆ ಕಡಿಮೆ ಮಾಡುವುದು ಮೊದಲಾದ ಉದ್ದೇಶದಿಂದ ನಾಣ್ಯಗಳನ್ನು ಮುದ್ರಿಸಲಾಗುತ್ತದೆ. ಇವೆಲ್ಲವೂ ಲೀಗಲ್‌ ಟೆಂಡರ್‌ ಕರೆನ್ಸಿಗಳು.ಪ್ರವೀಣ್‌ ಎಂ.ಪಿ.,  ದ.ಕ. ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next